ಕಸಾಪ ಬೈಂದೂರು ಹೋಬಳಿಯಲ್ಲಿ ಅವ್ಯವಹಾರ: ತನಿಕೆಗೆ ಆಗ್ರಹಿಸಿ ಪ್ರತಿಭಟನೆ

ಬೈಂದೂರು: 2012ರಲ್ಲಿ ಬೈಂದೂರಿನಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೈಂದೂರು ಮಾನವ ಹಕ್ಕು ಜಾಗೃತಿ ಸಮಿತಿಯ ವತಿಯಿಂದ ಸೂಕ್ತ ತನಿಕೆಗೆ ಆಗ್ರಹಿಸಿ ಇಲ್ಲಿನ ತಹಸೀಲ್ದಾರರ ಕಛೇರಿಯ ಎದುರು ಪ್ರತಿಭಟನೆ ನಡೆಯಿತು. 
        ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾನವ ಹಕ್ಕು ಜಾಗೃತಿ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಹೋಬಳಿಯ ಅಧ್ಯಕ್ಷರು ಸಮ್ಮೇಳನ ನಡೆದ ಇಲ್ಲಿಯ ತನಕ ಲೆಕ್ಕಪತ್ರ ಮಂಡಿಸಿಲ್ಲ, ಸಮ್ಮೇಳನಕ್ಕೆ ವಿವಿಧ ಸರಕು ಪೂರೈಸಿದವರಿಗೂ ಈವರೆಗೆ ಹಣ ಪಾವತಿಸಿಲ್ಲ. ಆದರೆ ಕ.ಸಾಪ. ಕೇಂದ್ರ ಸಮಿತಿಯಿಂದ ಮಂಜೂರಾದ ೧ ಲಕ್ಷ ರೂ. ಅನುದಾನದಲ್ಲಿ ೭೭೦೦೦ ಸಾವಿರವನ್ನು ಬೈಂದೂರು ಹೋಬಳಿ ಅಧ್ಯಕ್ಷ ಡಾ| ಸುಬ್ರಮಣ್ಯ ಭಟ್ ತನ್ನ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಈ ಕುರಿತು ಸೂಕ್ತ ತನಿಕೆ ನಡೆಸಿ ಸಮ್ಮೇಳನದಿಂದ ಬಾಕಿ ಇರುವ ಮೊತ್ತವನ್ನು ಸಂಬಂಧಿತರಿಗೆ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
      ಮನವಿಯನ್ನು ಬೈಂದೂರಿನ ವಿಶೇಷ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
 ಪ್ರತಿಭಟನೆಯಲ್ಲಿ ಮಾನವ ಹಕ್ಕು ಜಾಗೃತಿ ಸಮಿತಿಯ ಕಾರ್ಯದರ್ಶಿ ರವೀಂದ್ರ ಶಾನುಭೋಗ್,  ಜಗದೀಶ ಪಟವಾಲ್, ಜನಾರ್ಧನ ಆಚಾರ್ ಹಾಗೂ ಊರ ಪ್ರಮುಖರು ಪಾಲ್ಗೋಂಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಡಾ| ಸುಬ್ರಹ್ಮಣ್ಯ ಭಟ್, ೨೦೧೨ರ ತಾಲೂಕು ಸಮ್ಮೇಳನದ ಖರ್ಚು ವೆಚ್ಚಗಳನ್ನು ಕಸಾಪದ ಕೋರಿಕೆಯ ಮೇರೆಗೆ ತನ್ನ ವೈಯಕ್ತಿಕ ಖಾತೆಯಿಂದ ನೀಡಿದ್ದು, ಕಸಾಪ ದ ಅನುದಾನ ದೊರೆತ ಬಳಿಕ ನಾನು ಸಮ್ಮೇಳನಕ್ಕೆ ಭರಿಸಿದ ಒಟ್ಟು ಖರ್ಚುವೆಚ್ಚಗಳನ್ನು ಬ್ಯಾಂಕ್ ಮೂಲಕ ಹಿಂಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com