ಕೋಡಿ ಬ್ಯಾರೀಸ್‌ ಪ್ರಶಿಕ್ಷಣಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ

ಕುಂದಾಪುರ: ಕೋಡಿಯ  ಬ್ಯಾರೀಸ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಬಿ.ಎಡ್‌. ಪ್ರಶಿಕ್ಷಣಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ ಇತ್ತಿಚಿಗೆ ಜರಗಿತು.
      ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಂಡಾರ್‌ಕಾರ್ ಆರ್ಟ್ಸ್ ಮತ್ತು ಸಾಯನ್ಸ್‌ ಕಾಲೇಜಿನ ಪ್ರಾಂಶುಪಾಲ  ಡಾ| ಎನ್‌.ಪಿ. ನಾರಾಯಣ್‌ ಶೆಟ್ಟಿ ಮಾತನಾಡಿ,  ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕನ ಕರ್ತವ್ಯದ ಬಗ್ಗೆ ತಿಳಿಸುತ್ತಾ ಸೃಜನಶೀಲಾತ್ಮಾಕ ಬೋಧನೆಯ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯುವುದರ ಬಗ್ಗೆ ಹೆಚ್ಚಿನ ಒಲವನ್ನು ಹರಿಸಬೇಕೆಂದು ತಿಳಿಸಿದರು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್‌ ಮೆಹಮೂದ್‌ ಅವರು ವಹಿಸಿದ್ದರು.
      ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿದೇರ್ಶಕ ಪ್ರೊ| ಚಂದ್ರಶೇಖರ್‌ ದೋಮ ಪ್ರಾಸ್ತಾವಿಸಿದರು. ಬಿ.ಎಡ್‌ ಕಾಲೇಜಿನ ಪ್ರಾಂಶುಪಾಲ  ಸಿದ್ದಪ್ಪ ಕೆ.ಎಸ್‌. ಸ್ವಾಗತಿಸಿ, ಉಪನ್ಯಾಸಕ ರವಿಶಂಕರ್‌ ವಂದಿಸಿದರು. ಉಪನ್ಯಾಸಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com