​ಹಳ್ಳಿಬೇರಿಗೆ ಸಹಾಯಕ ಕಮಿಷನರ್‌ ಭೇಟಿ

ಕೊಲ್ಲೂರು: ಸಹಾಯಕ ಕಮಿಷನರ್‌ ಚಾರುಲತಾ ಸೊಮಲ್‌, ಭೂನ್ಯಾಯ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರ‌ ನೇತ್ರತ್ವದಲ್ಲಿ ಕೊಲ್ಲೂರು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೇರು ಎಂಬಲ್ಲಿನ 12ಮನೆಗಳ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳನ್ನು ಕುರಿತು ಮಾತನಾಡಿದ ಸಹಾಯಕ ಕಮಿಷನರ್‌ ಚಾರುಲತಾ ಸೊಮಲ್‌ ಅವರು ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಕಂದಾಯ ಇಲಾಖೆ ಬದ್ಧ‌ವಾಗಿದೆ. ಇಲ್ಲಿನ ಮೂಲಭೂತ ಆವಶ್ಯಕತೆಗಳನ್ನು  ಪೂರೈಸುವಲ್ಲಿ ಕಾನೂನಿನ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಲಾಗುವುದು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ  ತೊಂದರೆಯಾಗದಂತೆ ನಿಗಾ ವಹಿಸಲಾಗುವುದೆಂದು ಹೇಳಿದರು.

ಈ ಸಂದರ್ಭ ಭೂನ್ಯಾಯ ಮಂಡಳಿ ಸದಸ್ಯರಾದ ಪ್ರದೀಪ್‌ ಕುಮಾರ್‌ ಶೆಟ್ಟಿ  ಹಂಪಾರು, ಸೀತಾರಾಮ್‌ ಆಚಾರ್ಯ 11ನೇ ಉಳ್ಳೂರು, ನರಸಿಂಹ ಹಳಗೇರಿ, ಮಮತಾ ಆರ್‌. ಭಟ್‌ ಹಾಲಾಡಿ, ಮತ್ತು ಸಿಬಂದಿ ವರ್ಗ ಹಾಗೂ ಸ್ಥಳೀಯ ತಾಲೂಕು ಪಂಚಾಯತ್‌ ಸದಸ್ಯರಾದ ಕೆ. ರಮೇಶ್‌ ಗಾಣಿಗ,   ಉದಯ ಶೇರಿಗಾರ್‌, ಸದಸ್ಯರಾದ ಜಯಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com