ಅಮೃತೇಶ್ವರೀ ದೇವಳದ ಧಾರ್ಮಿಕ ಕಾರ‌್ಯಕ್ರಮಕ್ಕೆ ಚಾಲನೆ

ಕೋಟ: ಇಲ್ಲಿನ 14 ಗ್ರಾಮಗಳ ಬಹು ಕಾರಣಿಕ ದೇವತೆಯಾಗಿ ಪ್ರಸಿದ್ಧಿ ಪಡೆದ ಕೋಟ ಅಮೃತೇಶ್ವರೀ ದೇವಳದ ನೂತನ ಶಿಲಾ ದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಾಶಾಭಿಷೇಕ, ಹಾಲು ಹಬ್ಬ, ಗೆಂಡ ಸೇವೆ ಹಾಗೂ ತುಲಾಭಾರ ಸೇವೆ ಸಂಭ್ರಮದಿಂದ ಜ. 5ರಿಂದ 11ರವರೆಗೆ ಜರುಗಲಿದ್ದು, ಈ ಪ್ರಯುಕ್ತ ಮೊದಲ ದಿನದ ಧಾರ್ಮಿಕ ಕಾರ್ಯಕ್ರಮ ವೇದಮೂರ್ತಿ ಎಂ. ಮಧುಸೂಧನ ಬಾಯರಿ ಅವರ ನೇತೃತ್ವದಲ್ಲಿ ಸೋಮವಾರ ಆರಂಭಗೊಂಡಿತು.
   ಸಾಮೂಹಿಕ ಪ್ರಾರ್ಥನೆ, ನವಗ್ರಹ ಯಾಗ, ಮಹಾಪೂಜೆ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ಸಂಪನ್ನಗೊಂಡವು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಗೀತಾ ಕುಂದರ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ. ಜಗದೀಶ ಕಾರಂತ, ಅಮೃತೇಶ್ವರೀ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಾಯ ಜೋಗಿ, ಎಂ. ಸಂಜೀವ, ಸುಶೀಲಾ ಸೋಮಶೇಖರ, ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಜಿ. ರಾಜೀವ ದೇವಾಡಿಗ, ಕೆ. ರಾಜು ಪೂಜಾರಿ, ಎಚ್. ರಾಮದೇವ ಐತಾಳ್, ಎಂ. ಸುಬ್ರಾಯ ಆಚಾರ್ಯ, ಟಿ.ಜಿ. ಸುಧಾಕರ, ಸುನೀತಾ ರಾಜಾರಾಂ ಭುಜಂಗ ಗುರಿಕಾರ, ಕುಲದೀಪ್ ಸುಭಾಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com