ಮಠ ಮಾನ್ಯಗಳ ನಿಯಂತ್ರಣ ವಿಧೇಯಕದಲ್ಲಿ ಬದಲಾವಣೆ ಇಲ್ಲ

ಕೋಟ: ಹಿಂದೂ ಪರಂಪರೆಯ ಮಠ ಮಾನ್ಯಗಳ ನಿಯಂತ್ರಣ, ಸ್ವಾಧೀನದ ವಿಧೇಯಕ ಇದೀಗ ಎಲ್ಲೆಡೆ ಚರ್ಚೆಗೊಳ್ಳುತ್ತಿದೆ. ನಮ್ಮ ಸರಕಾರ ಮಠ, ಮಂದಿರಗಳ ರಕ್ಷಣೆಗೆ ಇದ್ದು, ಇವುಗಳು ಯಥಾಸ್ಥಿತಿಯಲ್ಲಿ ಮುಂದಿವರಿಯಲಿದೆ ಎಂದು ನಗರಾಭಿವದ್ದಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. 

ಅವರು ಸಂಜೆ ಕೋಟದ ಅಮತೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ದ್ವಿತೀಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಠ, ಮಂದಿರದ ನಿಯಂತ್ರಣದ ವಿಷಯದಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯುತ್ತಿದೆ. ಇದು ಹಿಂದಿನ ಸರಕಾರದ ಅವಧಿಯಲ್ಲಿ ಈ ವಿಧೇಯಕವನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಬಳಿಕ ಕಾನೂನು ಸಂಘರ್ಷವೂ ಸೇರಿದಂತೆ ನಾನಾ ಕಾರಣಗಳಿಂದ ಈ ಪ್ರಾಸ್ತಾವನೆ ಮುಂದೂಡುತ್ತಾ ಬಂದು, ನಮ್ಮ ಸರಕಾರ ವಿಧೇಯಕ ತಿದ್ದುಪಡಿ ತರಲು ಪ್ರಯತ್ನಿಸಲಾಗಿತ್ತು ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಹಸಿದ್ದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಶುಭಹಾರೈಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ರಾಜಾರಾಂ, ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಯ್ಕ್, ಸದಸ್ಯರಾದ ರಾಘವೇಂದ್ರ ಕಾಂಚನ್ ಬಾರಿಕೆರೆ, ಜಿ.ಭರತ್ ಕುಮಾರ್ ಶೆಟ್ಟಿ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಶಿವ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ದೇವಳದ ಕಾರ್ಯನಿರ್ವಹಣಾಧಿಕರಿ ಟಿ.ಜಿ ಸುಧಾಕರ ಮೊದಲಾದವರು ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಪ್ರಕಾಶ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಹರಿಕಥೆ, ಗೊಂಬೆಯಾಟ, ನತ್ಯ ಸೌರಭ, ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com