ಕೋಟ: ಕೋಟ, ಮಣೂರು ಪಡುಕರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜನತಾ ಫೀಶ್ ಮಿಲ್ ಹಾಗೂ ಜನತಾ ಸಮೂಹದ ಇತರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಆರೋಗ್ಯ ರಕ್ಷಣೆಗೆ, ಕಾರ್ಮಿಕ ಇಲಾಖೆಯಿಂದ ಕಡ್ಡಾಯಗೊಳಿಸಲಾದ ಆರೋಗ್ಯ ಸೌಲಭ್ಯಗಳ ಜತೆಗೆ ಅನೇಕ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದು, ಆರೋಗ್ಯ ಶಿಬಿರಗಳನ್ನು ಖಾಯಂ ಆಯೋಜಿಸುವ ಮೂಲಕ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಸಂಸ್ಥೆಯ ಆಡಳಿತ ಮುಖ್ಯಸ್ಥ ಆನಂದ್ ಸಿ.ಕುಂದರ್ ಮತ್ತು ಆಡಳಿತ ಮಂಡಳಿಯವರು, ಸಿಬಂದಿಗಳ ಆರೋಗ್ಯದ ಕುರಿತು ವಿಶೇಷ ಗಮನಹರಿಸುತ್ತಿದ್ದು, ಇತರ ಕಾರ್ಖಾನೆಗಳಿಗೆ ಮಾದರಿಯಾಗಿದ್ದಾರೆ.
ಸಂಘ-ಸಂಸ್ಥೆಗಳ ಜತೆಗೂಡಿ ಶಿಬಿರಗಳ ಆಯೋಜನೆ: ರೋಟರಿ ಕ್ಲಬ್ ಕೋಟ- ಸಾಲಿಗ್ರಾಮ, ಗೀತಾನಂದ ಫೌಡೇಶನ್, ಮಣಿಪಾಲ ಆಸ್ಪತ್ರೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಜತೆಗೂಡಿ, ದಂತ ಚಿಕಿತ್ಸಾ ಶಿಬಿರ, ನೇತ್ರ ತಪಾಸಣೆ ಶಿಬಿರ, ಸಂಪೂರ್ಣ ಆರೋಗ್ಯ ತಪಾಸಣೆ ಶಿಬಿರ ಮುಂತಾದ ಶಿಬಿರಗಳನ್ನು ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ಆಯೋಜಿಸಲಾಗುತ್ತದೆ.
ಪ್ರತಿ ವಾರ ಆರೋಗ್ಯ ತಪಾಸಣೆ
ಸಿಬಂದಿಗಳ ಆರೋಗ್ಯದ ಕುರಿತು ಹೆಚ್ಚಿನ ನಿಗಾವಹಿ ಸುವ ನಿಟ್ಟಿನಲ್ಲಿ , ಪ್ರತಿ ವಾರ ವೈದ್ಯ ರನ್ನು ಕಾರ್ಖಾನೆಗೆ ಕರೆಸಿಕೊಂಡು, ಆರೋಗ್ಯದಲ್ಲಿ ಎರುಪೇರಾದ ಕಾರ್ಮಿಕರ ಕುರಿತು ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ಮುಂದಿನ ಯೋಜನೆಗಳು ಹೃದಯ ತಪಾಸಣೆ, ಸಂಪೂರ್ಣ ದೇಹ ತಪಾಸಣೆ, ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ, ಆರೋಗ್ಯ ರಕ್ಷಣೆ ಕುರಿತು ಮಾಹಿತಿ, ರೋಗಗಳ ಕುರಿತು ಮುನ್ನೆ ಚ್ಚರಿಕೆ ಮುಂತಾದ ಕಾರ್ಯಕ್ರಮಗಳನ್ನು ಆಯೋ ಜಿಸುವ ಗುರಿ ಸಂಸ್ಥೆಯ ಮುಂದಿದೆ.
0 comments:
Post a Comment