ಮೀನುಗಾರರ ಸಮಸ್ಯೆ ಶೀಘ್ರ ಪರಿಹಾರ - ಸಚಿವ

ಕೋಟ: ಮೀನುಗಾರಿಕೆಯಲ್ಲಿ ಎದುರಾಗುವ ಸಮಸ್ಯೆ ಶೀಘ್ರ ಪರಿಹಾರವಾಗಬೇಕು. ಬಂದರು ಮುಂತಾದ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಒಟ್ಟಾರೆ ಮೀನುಗಾರರ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಬೇಕು ಎಂದು ಬಂದರು ಹಾಗೂ ಜವಳಿ ಸಚಿವ ಬಾಬು ರಾವ್‌ ಚಿಂಚನಸೂರು ಹೇಳಿದರು.

ಅವರು  ಮಾಬುಕಳ, ಹಂಗಾರಕಟ್ಟೆ, ಮೀನುಗಾರಿಕೆ ಜಟ್ಟಿ ಹಾಗೂ ಬಾರ್ಜ್‌ ಕಾಮಗಾರಿಯ ವೀಕ್ಷಣೆಗೆ ಆಗಮಿಸಿದ ಸಂದರ್ಭ ಪರ್ತಕರ್ತರೊಂದಿಗೆ ಮಾತನಾಡಿದರು.

ತಾನು ಮೀನುಗಾರ ಕುಟುಂಬಕ್ಕೆ ಸೇರಿದ್ದು ಈ ಜನಾಂಗದ ಎಲ್ಲ ಸಮಸ್ಯೆಗಳು ನನಗೆ ತಿಳಿದಿದೆ. ಅವರ ಸಮಸ್ಯೆಯ ಕುರಿತು ಹೆಚ್ಚಿನ ಅವಲೋಕನಕ್ಕಾಗಿ ಕರಾವಳಿಗೆ ಆಗಮಿಸಿದ್ದು, ಅವರ ನೋವು-ನಲಿವುಗಳಿಗೆ ಧ್ವನಿಯಾಗುತ್ತೇನೆ ಎಂದರು. 5 ಕೋಟಿ ರೂ. ವೆಚ್ಚದ ಹಂಗಾರಕಟ್ಟೆ ಮೀನುಗಾರಿಕೆ ಜಟ್ಟಿಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.

ಈ ಸಂದರ್ಭ ಬಂದರು ಇಲಾಖೆಯ ಅಧಿಕಾರಿಗಳಾದ ಟಿ.ಎಸ್‌.ರಾಥೋಡ್‌, ಜಂಬೋಲೆ, ಕ್ಯಾಪ್ಟನ್‌ ಮೋಹನ್‌, ಜೇಯ್ಸ ಡಯಾಸ್‌, ನಾಗರಾಜ್‌ ಮತ್ತು ಮೀನುಗಾರ ಮುಖಂಡರಾದ ಕೇಶವ ಕುಂದರ್‌, ಸರಳಾ ಕಾಂಚನ್‌, ಉತ್ತರ ಎಂ.ಕರ್ಕೇರ, ಬಿ.ಬಿ.ಕಾಂಚನ್‌, ಪುಂಡರೀಕ್ಷ ಮುಂತಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com