ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ: ಬೆಳ್ಳಿ ಪುಷ್ಪರಥ ಸಮರ್ಪಣೆ

ಕೋಟೇಶ್ವರ: ಇಲ್ಲಿನ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ 75ನೇ ಪ್ರತಿಷ್ಠಾ ವರ್ಧಂತಿ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸಲ್ಪಟ್ಟ ಬೆಳ್ಳಿ ಪುಷ್ಪರಥವನ್ನು ಕಾಶೀಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ದೇವರಿಗೆ ಸಮರ್ಪಿಸಿದರು.

      ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಶ್ರದ್ಧೆ, ತಾಳ್ಮೆ, ನಿರ್ಮಲ ಮನಸ್ಸು ಸಕಲ ಸಾಧನೆಗಳನ್ನು ಮಾಡಲು ಪ್ರೇರಣೆ ನೀಡುತ್ತವೆ. ಶ್ರದ್ಧಾ ಭಕ್ತಿಯಿಂದ ಮಾಡಿದ ಸೇವೆಯಿಂದ ತೃಪ್ತಿ ದೊರಕುತ್ತದೆ. ಮನಸ್ಸಿಗೆ ಉಲ್ಲಾಸ ನೀಡುತ್ತದೆ. ತಾಳ್ಮೆ ಮನುಷ್ಯನಿಗೆ ಅತ್ಯಗತ್ಯ. ಮನಸ್ಸಿನ ಮೇಲೆ ನಿಯಂತ್ರಣ ಇಟ್ಟುಕೊಂಡು ತಾಳ್ಮೆಯಿಂದ ಯಾವ ಕೆಲಸ ಮಾಡಿದರೂ ಅದರಿಂದ ಉತ್ತಮ ಫಲ ದೊರಕುತ್ತದೆ. ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಮಾಡಿದ ತಪ್ಪಿನಿಂದ ತುಂಬಾ ನಷ್ಟಗಳನ್ನು ಹಲವರು ಅನುಭವಿಸಿದ್ದಿದೆ ಎಂದು ಉದಾಹರಣೆ ಸಹಿತ ವಿವರಿಸಿದ ಸ್ವಾಮೀಜಿಯವರು ನಿರ್ಮಲ ಮನಸ್ಸು, ತಾಳ್ಮೆ ದೇವರ ಮೇಲಿನ ಭಕ್ತಿ ಹೆಚ್ಚು ಶಕ್ತಿ ನೀಡುತ್ತದೆ. ಇಂತಹ ಮನೋಭಾವವನ್ನು ಎಲ್ಲರೂ ಹೊಂದಲು ಪ್ರಯತ್ನಿಸಬೇಕು ಎಂದರು.

      ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಶ್ರೀಧರ ಕಾಮತ್‌ ಸ್ವಾಗತಿಸಿದರು. ಪ್ರತಿಷ್ಠಾ ವರ್ಧಂತಿ ಅನ್ವಯ ಉತ್ಸವ ಮೂರ್ತಿ ಹೊತ್ತ ಬೆಳ್ಳಿ ರಥವನ್ನು ಕೋಟೇಶ್ವರದ ಮುಖ್ಯ ರಸ್ತೆ, ಹಾಲಾಡಿ, ಗೋಪಾಡಿ, ಬೀಜಾಡಿ ರಸ್ತೆ ಅಲ್ಲದೇ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com