ಜ.31 ಕುಂಭಾಶಿಯಲ್ಲಿ ನಾಗಮಂಡಲೋತ್ಸವ

ಕುಂಭಾಸಿ: ಇಲ್ಲಿನ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೂಲ ನಾಗಸನ್ನಿಧಿಯಲ್ಲಿ ಜ.31 ರಂದು ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ನಡೆಯಿತು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಮತ್ತು ನಾಗಾಚಲ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಅರುಣ್ ಕಲ್‌ಗುಜ್ಜೀಕರ್ ಜಂಟಿಯಾಗಿ ಚಪ್ಪರ ಮುಹೂರ್ತ ನೆರವೇರಿಸಿದರು. 

ಉಡುಪಿ ನಾಗಪಾತ್ರಿ ನಾಗಾನಂದ ವಾಸುದೇವ ಆಚಾರ್ಯ ಆಶೀರ್ವಚನ ನೀಡಿ ಕರಾವಳಿ ನಾಗಾರಾಧನೆಯ ಬೀಡು. ಶ್ರದ್ಧಾ ಭಕ್ತಿ ಯಿಂದ ನಡೆಸುವ ಧಾರ್ಮಿಕ ಕಾರ್ಯದಿಂದ ಫಲ ಪ್ರಾಪ್ತಿಯಾಗುತ್ತದೆ ಎಂದರು. 

ನಾಗಮಂಡಲೋತ್ಸದ ಸಿದ್ಧತೆಯ ಕುರಿತು ಮಾತನಾಡಿದ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ 28ರಿಂದ ಉಗ್ರಾಣ ಮುಹೂರ್ತದೊಂದಿಗೆ ನಾಗಮಂಡಲೋತ್ಸವದ ಧಾರ್ಮಿಕ ವಿಧಿ ಆರಂಭಗೊಳ್ಳಲಿದೆ. ಅಂದು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದ್ದು. ಜ. 31ರಂದು ಬೆಳಗ್ಗೆ 6ಗಂಟೆಗೆ ಗಣೇಶ ಪ್ರಾರ್ಥನೆ ಯೊಂದಿಗೆ ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ವಿಧಿ ಆರಂಭಗೊಳ್ಳಲಿದೆ.  ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯುವುದು. 
ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಉಡುಪಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಹೊನ್ನಾವರ ಬಂಗಾರುಮಕ್ಕಿ ವೀರಾಂಜನೇಯ ಕ್ಷೇತ್ರದ ಮಾರುತಿ ಗುರೂಜಿ, ಆನೆಗುಡ್ಡೆ ದೇವಳದ ಆಡಳಿತ ಧರ್ಮದರ್ಶಿ ಕೆ. ಸೂರ‌್ಯನಾರಾಯಣ ಉಪಾಧ್ಯಾಯ ಆಶೀರ್ವಚನ ನೀಡುವರು ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com