ಕುಂಭಾಸಿ ಬಸ್‌ಸ್ಟಾಂಡ್‌ ಉಳಿಸಲು ಆಗ್ರಹ

ಕುಂಭಾಶಿ: ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದಿಂದಾಗಿ ಕುಂಭಾಶಿ ಶ್ರೀ ಹರಿಹರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅನೇಕ ವರ್ಷಗಳಿಂದಿದ್ದ ಬಸ್‌ ನಿಲ್ದಾಣವನ್ನು ಉಳಿಸಿ ಅಲ್ಲಿ ರಸ್ತೆ ವಿಭಾಜಕವನ್ನು ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲಕರ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಕುಂಭಾಶಿಯ ಗ್ರಾಮಸ್ಥರು  ಕುಂಭಾಸಿಯ ಕರ್ಣಾಟಕ ಬ್ಯಾಂಕ್‌ ಎದುರು ರಸ್ತೆ ತಡೆ ನಡೆಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗಣಪತಿ ಟಿ.ಶ್ರೀಯಾನ್‌ ಅವರು ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿ, ಚತುಷ್ಪಥ ಹೆದ್ದಾರಿ ಕರಾವಳಿಯ ಜನರನ್ನು ಇಬ್ಟಾಗವಾಗಿಸಿದೆ. ಅಲ್ಲದೆ ಜನ ಸಂಖ್ಯೆ ಹೆಚ್ಚಿರುವ ಈ ಭಾಗದಲ್ಲಿ ಬಸ್‌ ತಂಗು ದಾಣ ನಿರ್ಮಾಣವಾಗಬೇಕು ಹಾಗೂ ಮುಂದಿನ ದಿನಗಳಲ್ಲಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುಂತೆ ಆಗ್ರಹಿಸಿದರು.

ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ, ಸಬ್‌ ಇನ್‌ಸ್ಪೆಕ್ಟರ್‌ ನಾಸಿರ್‌, ಶ್ರೀಧರ ಉಪಾಧ್ಯಾಯ, ಹರಿಹರೇಶ್ವರ ದೇವಸ್ಥಾನ ಸಮಿತಿಯ ಶ್ರೀಪತಿ ಉಪಾಧ್ಯ, ಹಿರಿಯ ಪರಿಸರವಾದಿ ಕೊರ್ಗಿ ವಿಠuಲ್‌ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಲತಾ, ದಿನೇಶ್‌ ಶೇರ್ವೆಗಾರ್‌, ಲಕ್ಷ್ಮಣ ಕಾಂಚನ್‌, ಅಣ್ಣಯ್ಯ ಪುತ್ರನ್‌, ವಾಮನ್‌ ಉಪಾಧ್ಯಾಯ, ರಮೇಶ್ಮಂಜು, ಶೇಷಗಿರಿ ದೇವಾಡಿಗ, ಸುಧೀರ್‌ ಶೆಟ್ಟಿ, ಜಗದೀಶ್‌ ರಾವ್‌, ಗಣೇಶ್‌ ಭಟ್‌ ಗೋಪಾಡಿ, ರಾಜೀವ ಗಾಣಿಗ, ಪ್ರಸಾದ್‌ ಕಾಮತ್‌ , ಪಾಂಡು ಭಟ್‌, ವಿನೋದಾ ಶೇರ್ವೆಗಾರ್‌, ಪಾರ್ವತಿ ಗಾಣಿಗ ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com