ಕುಂದಪ್ರಭ ವಾರ್ಷಿಕೋತ್ಸವದಲ್ಲಿ ಕೋ.ಮ.ಕಾರಂತ ಪ್ರಶಸ್ತಿ ಪ್ರಧಾನ

ಕುಂದಾಪುರ: ಇಲ್ಲಿನ ಪ್ರಸಿದ್ಧ ವಾರಪತ್ರಿಕೆ ಕುಂದಪ್ರಭದ ವಾರ್ಷಿಕೋತ್ಸವ ಹಾಗೂ ಕೋ. ಮ. ಕಾರಂತ ಪ್ರಶಸ್ತಿ ಪ್ರಧಾನ ಸಮಾರಂಭ ಕಲಾಮಂದಿರದಲ್ಲಿ ಜರುಗಿತು. ಕೋ. ಮ. ಕಾರಂತ ಪ್ರಶಸ್ತಿಯನ್ನು ಯನ್ನು ಹೆಸರಾಂತ ಇತಿಹಾಸ ತಜ್ಞ, ಸಂಶೋಧಕ ಡಾ| ಕೆ. ಜಿ. ವಸಂತ ಮಾಧವ ಪ್ರದಾನ ಮಾಡಿ ಗೌರವಿಸಲಾಯಿತು.

ಸಮಾರಂಭವನ್ನು ಉದ್ಘಾಟಿಸಿದ  ಇತಿಹಾಸ ತಜ್ಞ ಮಂಗಳಗಂಗೋತ್ರಿಯ ಪ್ರೊ| ಬಿ. ಸುರೇಂದ್ರ ರಾವ್‌ ಮಾತನಾಡಿ, ಇತಿಹಾಸಗಾರರ ಕೆಲಸ ಬಹಳ ಸೂಕ್ಷ್ಮವಾದುದು. ಕೇವಲ ಶಿಲಾಶಾಸನ ಪರಿಗಣಿಸಿ ಸಂಶೋಧನೆ ಮಾಡುವುದರಿಂದ ಸತ್ಯ ತಿಳಿಯುವುದಿಲ್ಲ. ಇನ್ನೂ ಆಳಕ್ಕೆ ಹೋದಾಗ ಸತ್ಯ ತಿಳಿಯುತ್ತದೆ. 

ಇತಿಹಾಸ ಸಂಶೋಧನೆಯಲ್ಲಿ  ಬೇರೆ ಬೇರೆ  ಕ್ಷೇತ್ರದಲ್ಲಿ  ಆಳಿದವರ ಬೇರೆ ಬೇರೆ ಮುಖಗಳ ಪರಿಚಯವೂ ಆಗುತ್ತದೆ. ಆದರೆ ಅದನ್ನು ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ. ಹೀಗಾಗಿ ಓರ್ವ ಉತ್ತಮ ಇತಿಹಾಸಗಾರ ಎಲ್ಲರ ಪ್ರಶಂಸೆ ಪಡೆಯುವುದು ಕಷ್ಟ. ಈ ದೃಷ್ಟಿಯಲ್ಲಿ ಡಾ| ಕೆ.ಜಿ. ವಸಂತ ಮಾಧವ ಕೊಡಂಚರು ಹಲವು ದಶಕಗಳ ಕಾಲ ಸಂಶೋಧನೆ ನಡೆಸಿ ಸಾಧನೆ ಮಾಡಿ ಉತ್ತಮ ಮೆಚ್ಚುಗೆಯನ್ನು ಪಡೆ ದಿದ್ದಾರೆ ಅವರಿಗೆ ಈ ಪ್ರಶಸ್ತಿ ನೀಡಿರು ವುದು ಅಭಿನಂದನಾರ್ಹ ಎಂದು 
ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೊನ್ನಾವರ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್‌ ಮಾತನಾಡಿ, ಪತ್ರಕರ್ತರು ಸತ್ಯ ಬರೆದರೆ ಅವರು ಉತ್ತಮ ಇತಿಹಾಸಗಾರರು ಆಗುತ್ತಾರೆ. ಪತ್ರಿಕೆಗಳನ್ನೇ ಮಾದರಿಯಾಗಿಟ್ಟು ಕೊಂಡು ಹಲವು ಪ್ರಬಂಧಗಳು, ಸಂಶೋಧನಾ ಲೇಖನಗಳು ರಚಿಸಲ್ಪಟ್ಟಿವೆ. ಆದರೆ ಇಂದಿನ ಪತ್ರಿಕೋದ್ಯಮ ಇತಿಹಾಸದ ದಾಖಲೆ ಆಗಿ ಉಳಿಯುವ ಮಾದರಿಯಾಗಿಲ್ಲ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲವಾದರು ಒಟ್ಟಾರೆ ಪರಿಸ್ಥಿತಿ ಹಾಗಿದೆ . ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿ.ಪಂ. ಉಪಾಧ್ಯಕ್ಷ ಪ್ರಕಾಶ ಮೆಂಡನ್‌ ಹಾಗೂ ಹಿರಿಯ ಉದ್ಯಮಿ ದಾನಿ ದತ್ತಾನಂದ ಗಂಗೊಳ್ಳಿ   ಉಪಸ್ಥಿತರಿದ್ದರು.  ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು. ಎಸ್‌. ಶೆಣೈ ಸ್ವಾಗತಿಸಿದರು. ಅಂಕಣಗಾರ ಕೋ.ಶಿವಾನಂದ ಕಾರಂತರು ಅಭಿನಂದನ  ಪತ್ರ ವಾಚಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹಾಗೂ ಕರ್ನಾಟಕದ ಉತ್ತಮ ಚಲನಚಿತ್ರ ಹಜ್‌ ನಿರ್ಮಾಪಕ  ರಾಜ್‌ ಕೊಠಾರಿ ಅವರನ್ನು  ಗೌರವಿಸಲಾಯಿತು.  ಹಂದಕುಂದ ಸೋಮಶೇಖರ ಶೆಟ್ಟಿ, ಕೆ.ಕೆ. ರಾಮನ್‌, ಕಿರಣ್‌ ಭಟ್‌ ಅತಿಥಿಗಳನ್ನು ಪರಿಚಯಿಸಿದರು. ಡಿ.ಕೆ. ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಜಯವಂತ ಪೈ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com