26ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಜಾಥಾ

ಕುಂದಾಪುರ: ರಸ್ತೆ ಅವಘಡಗಳಿಗೆ ಬಲಿಯಾಗುವ ಮಕ್ಕಳ ಸಂಖ್ಯೆ ಇಂದು ಹೆಚ್ಚುತ್ತಿದೆ. ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಅವರಿಗೆ ಅರಿವಿಲ್ಲದಿರುವುದು ಮತ್ತು ದೊಡ್ಡವರ ಹೊಣೆಗೇಡಿತನಗಳೂ ಇದಕ್ಕೆ ಕಾರಣ. ಶಾಲಾ ಮಕ್ಕಳಲ್ಲಿ ರಸ್ತೆ ಸುರಕ್ಷೆ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಪೊಲೀಸರು ಈ ಬಗ್ಗೆ ನಡೆಯಿಸುವ ಕಾರ್ಯಕ್ರಮಗಳಲ್ಲಿ ದೊಡ್ಡವರು, ವಾಹನ ಚಾಲಕರು, ಪಾದಚಾರಿಗಳನ್ನು ಒಳಗೊಳಿಸಬೇಕು ಎಂದು ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ಎನ್‌. ನಾಯಕ್‌ ಹೇಳಿದರು.

26ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ನಗರದ ಸಂಚಾರಿ ಪೊಲೀಸರು ಏರ್ಪಡಿಸಿದ ಶಾಲಾ ಮಕ್ಕಳ ಜಾಥಾವನ್ನು ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಸೋಮವಾರ ಬೆಳಿಗ್ಗೆ ಚಾಲನೆಗೊಳಿಸಿ ಅವರು ಮಾತನಾಡಿದರು.

ತಹಶೀಲ್ದಾರ್‌ ನಾಯಕ್‌ ಮತ್ತು ಪುರಸಭಾಧ್ಯಕ್ಷೆ ಕಲಾವತಿ ಯು.ಎಸ್‌. ಜಂಟಿಯಾಗಿ ಹಸಿರು ನಿಶಾನೆ ತೋರುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಸಂಚಾರಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಇಮ್ರಾನ್‌ ಸ್ವಾಗತಿಸಿ, ರಸ್ತೆ ಸುರಕ್ಷತೆ ಕೇವಲ ಘೋಷಣೆಗೆ ಅಲ್ಲ. ಅದು ಜೀವನ ಶೆ„ಲಿ ಎಂಬ ಧ್ಯೇಯ ವಾಕ್ಯದೊಂದಿಗೆ ರಸ್ತೆ ಸುರûಾ ಸಪ್ತಾಹ ಆಚರಿಸಲಾಗುತ್ತಿ¤ದೆ. ರಸ್ತೆಯನ್ನು ಅಪಘಾತಮುಕ್ತ ವಲಯ ವನ್ನಾಗಿಸುವುದು, ಈ ಬಗ್ಗೆ ಎಲ್ಲರಿಗೂ ತಿಳುವಳಿಕೆ ನೀಡುವುದು ಇದರ ಉದ್ದೇಶ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.

ಕುಂದಾಪುರ ರೋಟರಿ ಅಧ್ಯಕ್ಷ ಮನೋಜ್‌ ನಾಯರ್‌, ಮಿಡ್‌ಟೌನ್‌ ರೋಟರಿ ಅಧ್ಯಕ್ಷ ಅಬ್ದುಲ್‌ ಬಶೀರ್‌ ಕೋಟ ಅವರು ಉಪಸ್ಥಿತರಿದ್ದರು.

ವಕ್ವಾಡಿ ಗುರುಕುಲ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಹಾಗೂ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮಕ್ಕಳು ರಸ್ತೆ ಸುರಕ್ಷೆ ಬಗ್ಗೆ ತಿಳಿವಳಿಕೆ ಮೂಡಿಸುವ ಬರಹಗಳನ್ನೊಳಗೊಂಡ ಭಿತ್ತಿಪತ್ರಗಳ ಪ್ರದರ್ಶನದೊಂದಿಗೆ ನಗರದಾದ್ಯಂತ ಜಾಥಾ ನಡೆಸಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷೆ ಬಗ್ಗೆ ಅರಿವು ಮೂಡಿಸಿದರು. ಸಂಚಾರಿ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್‌ ಸಿಬಂದಿಗಳು, ಅಧ್ಯಾಪಕರು, ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com