ಧರ್ಮಗುರು ಮುಕ್ತಿಧರ ಜೋಸೆಫ್‌ವಾಜ್ ಗೆ ಸಂತ ಪದವಿ: ಕುಂದಾಪುರದಲ್ಲಿ ಸಂಭ್ರಮ


ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಕ್ರೈಸ್ತ ಧರ್ಮಗುರು ಮುಕ್ತಿಧರ ಜೋಸೆಫ್‌ವಾಜ್ ಅವರನ್ನು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಶ್ರೀಲಂಕಾದಲ್ಲಿ ಸಂತ ಪದವಿ ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ ಗುರುವಾರ ಗಂಗೊಳ್ಳಿಯಲ್ಲಿ ಕ್ರೈಸ್ತ ಸಮಾಜಬಾಂಧವರು ಸಂಭ್ರಮಿಸಿ ಚರ್ಚ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
     ಮೊದಲು ಗಂಗೊಳ್ಳಿಯ ಬಂದರು ಪ್ರದೇಶದಿಂದ ಚರ್ಚ್ ವರೆಗೆ ಮುಕ್ತಿಧರ ಜೋಸೆಫ್ ವಾಜ್ ಅವರ ಪ್ರತಿಮೆಯ ಭವ್ಯ ಮೆರವಣಿಗೆ ನಡೆಸಿದರು. ಬಳಿಕ ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ಚರ್ಚಿನಲ್ಲಿ ಪವಿತ್ರ ಬಲಿಪೂಜೆ ನಡೆಯಿತು.
    ಗಂಗೊಳ್ಳಿ ಚರ್ಚ್‌ನ ಧರ್ಮಗುರು ರೆ.ಫಾ. ಅಲ್ಫೋನ್ಸ್ ಡಿಲೀಮಾ ಹಾಗೂ ರೆ.ಫಾ. ಫೆಲಿಕ್ಸ್ ನೊರೊನ್ಹಾ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಆಶೀರ್ವಚನ ನೀಡಿದರು. ಚರ್ಚಿನ ಆಡಳಿತ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್ ಮತ್ತು ನೂರಾರು ಕ್ರೈಸ್ತ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com