ಕುಂದಾಪುರ: ಬಿಜೆಪಿ ಸದಸ್ಯತ್ವ ಅಭಿಯಾನ

ಕುಂದಾಪುರ:ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾದವರಿಂದ ಜ.17ರಂದು  ಕುಂದಾಪುರ  ಸಂತೆ ಮಾರ್ಕೆಟ್‌ನಲ್ಲಿ ಸದಸ್ಯತಾ ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷೆ  ಸರೋಜ ಯಡ್ತಾಡಿ, ಶೋಭಾ, ಬಾಬಿ, ಮಾಲಿನಿ ಸತೀಶ್‌, ಕ್ಷೇತ್ರ ಅಧ್ಯಕ್ಷ ರಾಜೇಶ್‌ ಕಾವೇರಿ, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್‌ ಕುಮಾರ್‌, ಮಹೇಶ್‌ ಪೂಜಾರಿ, ಶಂಕರ ಅಂಕದಕಟ್ಟೆ, ಶ್ರೀಪತಿ ಹೆಬ್ಟಾರ್‌, ದಿನಕರ ಕೊತ್ವಾಲ್‌, ಅನಿಲ್‌ ಕುಂದಾಪುರ ಅಬ್ದುಲ್‌ ಸಿಯಾಲ್‌ ಉಪಸ್ಥಿತರಿದ್ದರು.

ಕೋಟೇಶ್ವರದಲ್ಲಿ  ಬಿಜೆಪಿ ಸಕ್ರಿಯ ಸದಸ್ಯತ್ವ  ಸಮಾವೇಶ ರಾಷ್ಟ್ರಾದ್ಯಂತ ನಡೆಯುತ್ತಿರುವ ಬಿಜೆಪಿಯ ಸದಸ್ಯತಾ ಅಭಿಯಾನವು 2ನೇ ಹಂತಕ್ಕೆ ತಲುಪಿದ್ದು ಸಕ್ರಿಯ ಸದಸ್ಯತಾ  ನೋಂದಾವಣೆ ಪ್ರಕ್ರಿಯೆ  ಆರಂಭವಾಗಿದೆ. ಈ ನಿಟ್ಟಿನಲ್ಲಿ  ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 400 ಮಂದಿ ಸಕ್ರಿಯ ಸದಸ್ಯರನ್ನಾಗಿ ನೋಂದಾಯಿಸುವ ಗುರಿ ಹೊಂದಲಾಗಿದೆ.

ಹೀಗೆ ಗುರುತಿಸಲ್ಪಟ್ಟ ಸಕ್ರಿಯ ಸದಸ್ಯರು ಮತ್ತು ಸಕ್ರಿಯ ಸದಸ್ಯರಾಗಲು ಆಸಕ್ತಿ ಹೊಂದಿದವರಿಗೆ ಸಕ್ರೀಯ ಸದ ಸ್ಯರ ಸಮಾವೇಶವನ್ನು ಕೋಟೇಶ್ವರದಲ್ಲಿ ಹಮ್ಮಿಕೊಳ್ಳಲಾಗಿದೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com