ಜ.25: ಕೆ.ಪಿ. ಜಯನ್‌ಗೆಡಾ| ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪುರ:  ಕುಂದಾಪುರದ ಕೈರಳಿ ಸುಹೃದ್ವೇದಿ ವತಿಯಿಂದ ನೀಡಲಾಗುವ ಡಾ| ಕೋಟ ಶಿವರಾಮ ಕಾರಂತ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಬಹುಭಾಷಾ ಹಾಡುಗಾರ ಕೆ.ಪಿ.ಜಯನ್‌ ಅವರಿಗೆ  ಜ. 25ರಂದು ಸಂಜೆ 5ಕ್ಕೆ  ಸರಕಾರಿ ಪ.ಪೂ.ಕಾಲೇಜು ವಠಾರದಲ್ಲಿ ನಡೆಯುವ ಸಮಾರಂಭದಲ್ಲಿ   ನೀಡಿ ಪುರಸ್ಕರಿಸಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಪಿ. ಶ್ರೀಶನ್‌ ವಹಿಸಲಿದ್ದಾರೆ.

ಉದ್ಘಾಟಕರಾಗಿ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಉಮೇಶ್‌ ಪುತ್ರನ್‌ ಭಾಗವಹಿಸಲಿದ್ದು,  ಮುಖ್ಯ ಅತಿಥಿಗಳಾಗಿ ಕೊಲ್ಲೂರು ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೃಷ್ಣ ಪ್ರಸಾದ್‌ ಅಡ್ಯಂತಾಯ, ರೋಟರಿ ಅಸಿಸ್ಟೆಂಟ್‌ ಗವರ್ನರ್‌ ಗಣೇಶ್‌ ಶೆಟ್ಟಿ ಮೊಳಹಳ್ಳಿ, ರೋಟರಿ ಕುಂದಾಪುರದ ಅಧ್ಯಕ್ಷ ಮನೋಜ್‌ ನಾಯರ್‌ ಆಗಮಿಸಲಿದ್ದಾರೆ. ಅನಂತರ ಸರಕಾರಿ ಪ.ಪೂ. ಕಾಲೇಜು ವಠಾರದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕೆ.ಪಿ. ಶ್ರೀಶನ್‌ ಪ್ರಕಟನೆಯಲ್ಲಿ  ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com