​ಬೃಹತ್‌ ರಕ್ತದಾನ ಶಿಬಿರ ಉದ್ಘಾಟನೆ

ಕುಂದಾಪುರ: ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸಿದಂತಹ  ಕಾರ್ಯವನ್ನು ಮಾಡಿ ದಂತಾಗುವುದು. ಈ  ರಕ್ತದಾನದ ಮೂಲಕ  ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ  ವಿನಯ ಕುಮಾರ ಸೊರಕೆ ಹೇಳಿದರು.

ಅವರು   ಕುಂದಾಪುರ ಶ್ರೀ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ  ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ (ರಿ.) ಕುಂದಾಪುರ ಇವರ ನೇತೃತ್ವದಲ್ಲಿ  ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಮೊಗವೀರ ಯುವ ಸಂಘಟನೆ (ರಿ.) ಕುಂದಾಪುರ ಘಟಕ, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ (ರಿ.)ಅಂಬಲಪಾಡಿ ಉಡುಪಿ,ರಕ್ತನಿಧಿ ಕೆ.ಎಂ.ಸಿ. ಮಣಿಪಾಲ, ಜಿಲ್ಲಾಡಳಿತ ಆಸ್ಪತ್ರೆ ಉಡುಪಿ, ಹೂವಿನ ವ್ಯಾಪಾರಿಗಳ ಸಂಘ (ರಿ.)ಕುಂದಾಪುರ, ಮಯೂರ ಕ್ರಿಕೆಟ್‌ ಕ್ಲಬ್‌  ಕುಂದಾಪುರ ಇವರ  ಆಶ್ರಯದಲ್ಲಿ   ನಡೆದ ಬೃಹತ್‌  ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಪುರಾತನ ಕಾಲದಿಂದಲೂ ಚಿನ್ನದ ಕೆಲಸಗಾರರ ಕೌಶಲ್ಯವನ್ನು  ನಾವು ಗುರುತಿಸುತ್ತಲೇ ಬಂದಿದ್ದೇವೆ.  ಭಾರತದಿಂದ  ವಿದೇಶಕ್ಕೆ ರಪ್ತಾಗುವ ಅತ್ಯಮೂಲ್ಯ ವಸ್ತುಗಳಲ್ಲಿ  ಇವರ ಚಿನ್ನದ ಕರಕುಶಲ ವಸ್ತುಗಳು ರಫ್ತಾಗುತ್ತವೆ.  ವಿಶ್ವಕರ್ಮ ಸಮುದಾಯದಲ್ಲಿ  ಅದೆಷ್ಟೋ ಪ್ರತಿಭೆಗಳಿದ್ದರೂ ಕೂಡಾ ಇಂದಿಗೂ  ವಿಶ್ವಕರ್ಮ ಸಮುದಾಯ  ಬಡತನ ರೇಖೆ ಗಳಿಗಿಂತಲೂ ಕೆಳಗೆ ಇದೆ. ಈ ನಿಟ್ಟಿನಲ್ಲಿ  ವಿಶ್ವಕರ್ಮ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿ ಸಾಮಾಜಿಕ, ಆರ್ಥಿಕ  ಶಕ್ತಿ ನೀಡುವ ಮೂಲಕ  ಸರಕಾರ ವಿಶ್ವಕರ್ಮ ನಿಗಮ ಸ್ಥಾಪಿಸಿದೆ ಎಂದರು. ಪ್ರಸ್ತು ವೈಜ್ಞಾನಿಕ ಬದಲಾವಣೆ ಹೊಂದಿಕೊಂಡು  ಚಿನ್ನದ ಕೆಲಸಗಾರರ ವೃತ್ತಿಗೆ ಅಪಾಯ ಬರುವ ಸನ್ನಿವೇಶ ಎದುರಾದಾಗ ಎಲ್ಲರೂ ಒಗ್ಗೂಡಿಕೊಂಡು ವಿಚಾರ ವಿನಿಮಯ ಮಾಡಿಕೊಳ್ಳಿ,  ವಿಶ್ವಕರ್ಮ ಸಮಾಜದ ಸಮಸ್ಯೆಗಳಿಗೆ  ಹೆಚ್ಚಿನ ಸ್ಪಂದನ ನೀಡುವ ಭರವಸೆಯನ್ನು ನೀಡಿದರು.

ಮುಖ್ಯ ಅತಿಥಿ ಸತೀಶ್‌ ಶೇಟ್‌ ನಾಡಾ ಗುಡ್ಡೆಯಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷ  ಸಂಜಯ್‌ ಪಾಟೀಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ  ಉಪಸ್ಥಿತರಿದ್ದ  ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ (ರಿ.) ಅಂಬಲಪಾಡಿ ಇದರ ಪ್ರವರ್ತಕ  ಡಾ|  ಜಿ. ಶಂಕರ್‌ ಮಾತನಾಡಿ,   ಒಂದು ಯುನಿಟ್‌  ರಕ್ತದಿಂದ ಮೂರು ಜೀವವನ್ನು ಉಳಿಸಬಹುದಾಗಿದ್ದು  ಈಗಾಗಲೇ ರಕ್ತ ಸಂಗ್ರಹಣದಲ್ಲಿ ಹತ್ತು ಸಾವಿರ ಯುನಿಟ್‌ ದಾಟಿದ್ದೇವೆ  ಮುಂದಿನ ದಿನಗಳಲ್ಲಿ ಸುಮಾರು  ಹದಿನೈದು ಸಾವಿರ  ಯುನಿಟ್‌ ರಕ್ತವನ್ನು ಸಂಗ್ರಹಿಸುವ ಗುರಿಯಲ್ಲಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ  ವಿನಯ ಕುಮಾರ ಸೊರಕೆಯವರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಕುಂದಾಪುರ ತಾಲೂಕು ಚಿನ್ನ, ಬೆಳ್ಳಿ ಕೆಲಸಗಾರರ ಸಂಘದಿಂದ  ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಉಚ್ಚಿಲ ಗಣೇಶ್‌ ಆಚಾರ್ಯ,  ಕೆ.ಎಂ.ಸಿ ಮಣಿಪಾಲದ ವೈದ್ಯಾಧಿಕಾರಿ ಡಾ| ಕರಿಶ್ಮಾ , ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲಾ ಅಧ್ಯಕ್ಷ  ಸದಾನಂದ ಬಳ್ಕೂರು,  ಮೊಗವೀರ ಯುವ ಸಂಘಟನೆ (ರಿ.) ಕುಂದಾಪುರ ಘಟಕದ ಅಧ್ಯಕ್ಷ ದಿವಾಕರ್‌ ಮೆಂಡನ್‌ ಪಿ., ಹೂವಿನ ವ್ಯಾಪಾರಿಗಳ ಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌, ಮಯೂರ ಕ್ರಿಕೆಟ್‌ ಕ್ಲಬ್‌  ಕುಂದಾಪುರ ಇದರ ಅಧ್ಯಕ್ಷ  ನಾಗರಾಜ ಆಚಾರ್ಯ,  ಜಯ ಸಿ. ಕೋಟ್ಯಾನ್‌ ಉಪಸ್ಥಿತರಿದ್ದರು.

ಕುಶಲ ಆಚಾರ್ಯ ಬನ್ನಾಡಿ ಸ್ವಾಗತಿಸಿ, ಚಿತ್ರಕಲಾ ಶಿಕ್ಷಕ ರಾಘವೇಂದ್ರ ಆಚಾರ್ಯ ಮನವಿ ಪತ್ರ ಮಂಡಿಸಿ, ರಾಜೇಶ್‌ ಆಚಾರ್ಯ ನಿರೂಪಿಸಿ, ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com