ಕುಂದಾಪುರ: ಕಲಾಸಕ್ತಿಯಿಂದ ಓರ್ವ ವ್ಯಕ್ತಿ ಗುರುತಿಸಲ್ಟಡುವುದರ ಜೊತೆಗೆ ಸಾಧಕರ ಬಗ್ಗೆ ಗೌರವ ಮೂಡುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕೂಡಾ ಲಲಿತಕಲಾಸಕ್ತಿ ಅತೀ ಮುಖ್ಯವಾಗಿದ್ದು ಕಲೆ ಎನ್ನುವುದು ಹೃದಯದಿಂದ ಮೂಡಿಬರಬೇಕು ಎಂದು ಕರ್ಣಾಟಕ ಬ್ಯಾಂಕ್ ನಿರ್ದೇಶಕ ಡಾ|ಎಚ್. ರಾಮ್ಮೋಹನ್ ಅಭಿಪ್ರಾಯ ಪಟ್ಟರು.
ಸಾಧನ ಸಂಗಮ ಟ್ರಸ್ಟ್ (ರಿ.), ಕುಂದಾಪುರ ನೇತೃತ್ವದಲ್ಲಿ ಆರ್ಟಿಸ್ಟ್ ಫೋರಂ ಉಡುಪಿ ಇವರ ಮಾರ್ಗದರ್ಶನ ದಲ್ಲಿ ಕುಂದಾಪುರದ ಸ.ಪ.ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಆಯೋಜಿಸಲಾದ ಎರಡು ದಿನಗಳ ಕಾಲ ನಡೆಯುವ ಸಂಕಲನ-2015 ಕರಾವಳಿಯ ಕಲಾವಿದರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜನಜೀವನದಲ್ಲಿ ಅತೀ ಮುಖ್ಯ ವಾಗಿರುವ ಚಿತ್ರಕಲೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಇವತ್ತು ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ಕೊರತೆಯೂ ಇದೆ. ಇದೆಲ್ಲವನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಮತ್ತು ಪ್ರೋತ್ಸಾಹ ನೀಡುವ ಕೆಲಸವಾದಾಗ ಚಿತ್ರಕಲೆ ಬೆಳೆಯುತ್ತದೆ ಎಂದರು.
ಉಡುಪಿಯ ಆರ್ಟಿಸ್ಟ್ ಫೋರಂನ ಸ್ಥಾಪಕ ಅಧ್ಯಕ್ಷ ರಮೇಶ ರಾವ್ ಶುಭಾಶಂಸನೆಗೆ„ದು, ಕಲಾಶಿಬಿರಗಳಲ್ಲಿ ಕಲಾ ಪ್ರೇಮಿಗಳು ಹೆಚ್ಚಾಗಿ ಭಾಗವಹಿಸಿ ದಾಗ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ. ಉಡುಪಿಯಂತೆ ಕುಂದಾಪುರದಲ್ಲಿಯೂ ಒಂದು ಆರ್ಟ್ ಸೆಂಟರ್ನ ಆವಶ್ಯಕತೆ ಇದೆ ಎಂದರು.
ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್. ಹೆಬ್ಟಾರ್, ಶ್ರೀ ಮಾತಾ ಆಸ್ಪತ್ರೆಯ ಡಾ| ಸತೀಶ್ ಪೂಜಾರಿ, ಸ.ಪ.ಪೂ. ಕಾಲೇಜು ಕುಂದಾಪುರ ಇಲ್ಲಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜಿ.ಜೋಷಿ, ಪತ್ರಕರ್ತ ಯು.ಎಸ್. ಶೆಣೆ„, ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಉಪಸ್ಥಿತರಿದ್ದರು.
ಸಾಧನ ಸಂಗಮದ ಮ್ಯಾನೇಜಿಂಗ್ ಟ್ರಸ್ಟಿ ನಾರಾಯಣ ಐತಾಳ್ ಸ್ವಾಗತಿಸಿದರು. ಉಪನ್ಯಾಸಕ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧನ ಸಂಗಮದ ಟ್ರಸ್ಟಿ ಮಂಜುನಾಥ ಮಯ್ಯ ಸಂಕಲನ ದಲ್ಲಿ ಭಾಗವಹಿಸುತ್ತಿರುವ ಚಿತ್ರಕಲಾವಿದರನ್ನು ಪರಿಚಯಿಸಿ, ವಂದಿಸಿದರು. ಡಾ| ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು.
0 comments:
Post a Comment