ಸ್ವರೂಪ ಶಿಕ್ಷಣ ಜಾಗೃತಿ ಪ್ರದರ್ಶನ ಉದ್ಘಾಟನೆ

ಕುಂದಾಪುರ: ಮಂಗಳೂರಿನ ಸ್ವರೂಪ ಶಿಕ್ಷಣ ಅಧ್ಯಯನ ಕೇಂದ್ರದಿಂದ ನಡೆಯುತ್ತಿರುವ ಸ್ವರೂಪ ಶಿಕ್ಷಣ ಜಾಗೃತಿ ಜಾಥಾದ ಪ್ರದರ್ಶನವನ್ನು ಕುಂದಾಪುರದಲ್ಲಿ ರೋಟರಿ ವಲಯ-1ರ ಸಹಾಯಕ ಕಮಿಷನರ್‌ ಗವರ್ನರ್‌ ಗಣೇಶ್‌ ಶೆಟ್ಟಿ  ಮೊಳಹಳ್ಳಿ ಉದ್ಘಾಟಿಸಿದರು.

ಕುಂದಪ್ರಭ ಸಂಸ್ಥೆ ಸರಕಾರಿ ಪ.ಪೂ.ಕಾಲೇಜು ಕುಂದಾಪುರ ಸಹಯೋಗದೊಂದಿಗೆ ರೋಟರಿ ಕ್ಲಬ್‌ ಕುಂದಾಪುರ, ರೋಟರಿ ಕುಂದಾಪುರ ದಕ್ಷಿಣ, ರೋಟರಿ ಕುಂದಾಪುರ ಮಿಡ್‌ಟೌನ್‌ ಹಾಗೂ ರೋಟರಿ ಕುಂದಾಪುರ ಸನ್‌ರೈಸ್‌  ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಧಿಕಾರಿ ಗೋಪಾಲ ಶೆಟ್ಟಿ ವಹಿಸಿದ್ದರು.

ಈ ಶಿಕ್ಷಣ ಜಾಗೃತಿ ಕಾರ್ಯಕ್ರಮ ಅದ್ಭುತವಾಗಿದ್ದು ವಿದ್ಯಾರ್ಥಿಗಳಲ್ಲಿ 'ಸಾಧನೆ' ಮಾಡುವ ಸ್ಫೂ³ರ್ತಿ ಬೆಳೆಸುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿ ಮನಪರಿವರ್ತನೆ ಮಾಡುವ ಈ ಕಾರ್ಯಕ್ರಮ ಎಲ್ಲ ಕಡೆ ನಡೆಯಬೇಕು ಎಂದು ಉದ್ಘಾಟನಾ ಭಾಷಣದಲ್ಲಿ ಗಣೇಶ ಶೆಟ್ಟಿ  ಮೊಳಹಳ್ಳಿ ಹೇಳಿದರು.

ಶಿಕ್ಷಣಾಧಿಧಿಕಾರಿ ಗೋಪಾಲ ಶೆಟ್ಟಿ ಮಾತನಾಡಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಪ್ರಕಟಿಸಲು ಅವರಲ್ಲಿ ಸ್ಮರಣ ಶಕ್ತಿ ವೃದ್ಧಿಸಲು, ಅವರ ಆತ್ಮವಿಶ್ವಾಸ ಹೆಚ್ಚಿಸಲು ಗೋಪಾಡ್ಕರ ನೇತೃತ್ವದ ಸಂಶೋಧನಾ ತಂಡ ಇದರ ಪ್ರಯೋಜನ ಪಡೆಯ ಬೇಕು ಎಂದರು.

ರೋಟರಿ ಕ್ಲಬ್‌ ಕುಂದಾಪುರ ಅಧ್ಯಕ್ಷ ಮನೋಜ ನಾಯರ್‌, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಕೆ.ಪಿ.ಭಟ್‌, ರೋಟರಿ ಕುಂದಾಪುರ ಮಿಡ್‌ಟೌನ್‌ ಅಧ್ಯಕ್ಷ ಅಬ್ದುಲ್‌ ಬಶೀರ್‌ ರೋಟರಿ ಕುಂದಾಪುರ ಸನ್‌ರೈಸ್‌ ಅಧ್ಯಕ್ಷ  ಶ್ರೀನಿವಾಸ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕುಂದಪ್ರಭ ಸಂಸ್ಥೆ ಅಧ್ಯಕ್ಷ ಯು.ಎಸ್‌.ಶೆಣೈ  ಸ್ವಾಗತಿಸಿದರು. ಸರಕಾರಿ ಪ.ಪೂ.ಕಾಲೇಜಿನ ಉಪ ಪ್ರಾಂಶುಪಾಲ ಮೋಹನ್‌ ರಾವ್‌ ಅಭಿನಂದನಾ ಮಾತುಗಳನ್ನಾಡಿದರು.

ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್‌ ಈಗಿನ ಶಿಕ್ಷಣದಲ್ಲಿ ಬಹಳ ಪರಿವರ್ತನೆ ಆಗಬೇಕು. ಮಕ್ಕಳು ಕೇವಲ ಪುಸ್ತಕದ ಹೊರೆ ಹೊರುವ ಆಳುಗಳಂತಾಗದೇ ಅವರು ಕೇವಲ ಅಂಕಗಳಿಗಾಗಿ ಇಡಿ ವರ್ಷ ಕಳೆಯುವುದರ ಬದಲು ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಪ್ರೇರಣೆ ದೊರಕಬೇಕು. ಅವರ ಪ್ರತಿಭೆ ಅರಳಬೇಕು. ಅವರು ಸಾಧಕರಾಗ ಬೇಕು ಅದೆ ನಮ್ಮ ಪ್ರಯತ್ನ ಎಂದರು.

ಮನೋಜ್‌ ನಾಯರ್‌ ವಂದಿಸಿದರು. ಎರಡು ಗಂಟೆಗಳ ಕಾಲ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಪ್ರದರ್ಶನ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com