ಕುಂದಾಪುರದಲ್ಲಿ ತಪಾಸಣೆ ನಡೆಸಿದ ಬೆಂಗಳೂರು ಸಿಸಿಬಿ ತಂಡ

ಕುಂದಾಪುರ: ಬೆಂಗಳೂರು ಸ್ಪೋಟ ಪ್ರಕರಣದ ಶಂಕಿತ ಆರೋಪಿಯೊಂದಿಗೆ ಬೆಂಗಳೂರಿನ ಸಿಸಿಬಿ ತಂಡ ಕುಂದಾಪುರದಲ್ಲಿ ತಪಾಸಣೆ ಮುಂದುವರಿಸಿದೆ. ಎರಡು ಖಾಸಗಿ ವಾಹನದಲ್ಲಿ ಆಗಮಿಸಿರುವ ತಂಡ ಶಂಕಿತ ಆರೋಪಿ ಕುಂದಾಪುರದಲ್ಲಿ ಮದ್ದುಗುಂಡು ತಯಾರಿಕೆಗೆ ಮದ್ದು ಖರೀದಿ ಮಾಡಿರುವ ಬಗ್ಗೆ ನೀಡಿದ ಸುಳಿವು ಆಧರಿಸಿ ಮಾಹಿತಿ ಸಂಗ್ರಹಿಸಿದರು. ಸ್ಥಳೀಯ ಪೊಲೀಸರಿಂದ ಮದ್ದು ಸಂಗ್ರಾಹಕರ ವಿವರ ಪಡೆದರು. ತಂಡ ಮುರ್ಡೇಶ್ವರ, ಭಟ್ಕಳ, ಶಿರೂರು, ಅಮಾಸೆಬೈಲುವಿಗೆ ಭೇಟಿ ನೀಡಿ ವಿವರ ಕಲೆ ಹಾಕಿದೆ ಎಂಬ ಮಾಹಿತಿ ಲಭಿಸಿದೆ. 

ತೀವ್ರಗೊಂಡ ತನಿಖೆ: ಶಂಕಿತ ಆರೋಪಿ ರಿಯಾಜ್ ಭಟ್ಕಳ ವಿಚಾರಣೆ ನೀಡಿರುವ ಮಾಹಿತಿಯಂತೆ ಕುಂದಾಪುರ ಮತ್ತು ಉಡುಪಿ ಭಾಗದಲ್ಲಿ ಎನ್‌ಐ ನಿರ್ದೇಶನದಡಿ ಸಿಸಿಬಿ ಬೆಂಗಳೂರು ತಂಡ ವಿಸ್ತ್ರತ ಮಾಹಿತಿ ಕಲೆ ಹಾಕುತ್ತಿದೆ. ಸೋಮವಾರ ತಂಡ ಭಟ್ಕಳದಲ್ಲಿ ಬಹಳಷ್ಟು ಮಾಹಿತಿ ಕಲೆ ಹಾಕಿದ್ದು ಹಲವು ಮನೆಗಳಿಗೆ, ಬೀಚ್ ಪ್ರದೇಶಗಳಿಗೆ ತೆರಳಿ ವಿವರ ಪಡೆದುಕೊಂಡಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com