ರಮೇಶ್ ಭಂಡಾರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ

ಉಡುಪಿ: ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದ ಜಾತ್ರೆ ಸಂದರ್ಭ ಸಾಲಿಗ್ರಾಮ ಮೇಳದ ಖ್ಯಾತ ಹಾಸ್ಯ ಕಲಾವಿದ ಕುಮಟಾ ಮೂರೂರು ರಮೇಶ್ ಭಂಡಾರಿ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ಮಾತನಾಡಿದರು. ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಶಂಕರನಾರಾಯಣ ಭಟ್, ಗಂಗಾ ಆರ್. ಭಟ್, ರಾಜಾಪುರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ನಾಯಕ್, ಧರ್ಮದರ್ಶಿ ಕೃಷ್ಣ ರಾಜೇಂದ್ರ ಭಟ್, ಅರ್ಚಕ ರವೀಂದ್ರ ಭಟ್, ಉದ್ಯಮಿ ಸಿರಿಯಣ್ಣ ಶೆಟ್ಟಿ, ಸುದೀಂದ್ರ ಭಟ್, ಸುಜ್ಞೇಂದ್ರ ಭಟ್, ಭರಣಿ ಸದಾಶಿವ, ಶಂಕರ ಅಂಬೇಲ್ಕರ್, ಪ್ರಕಾಶ್ ವಾಗ್ಲೆ, ಪ್ರಶಾಂತ್ ವಾಗ್ಲೆ ಉಪಸ್ಥಿತರಿದ್ದರು. ಬಳಿಕ ಭೂತ ಬಲಿ, ರಂಗ ಪೂಜೆ, ದೈವ ಭೇಟಿ, ಅಗ್ನಿ ಕೇಳಿ, ವಸಂತ ಪೂಜೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com