ಫೆ. 5ರಿಂದ ಲಾವಣ್ಯ ನಾಟಕೋತ್ಸವ

ಬೈಂದೂರು: ಇಲ್ಲಿನ ಹೆಸರಾಂತ ರಂಗಸಂಸ್ಥೆ ಲಾವಣ್ಯ ಬೈಂದೂರು ತನ್ನ 38ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಜ್ಯಮಟ್ಟದ ನಾಟಕೋತ್ಸವ ರಂಗತರಂಗ-2015ನ್ನು ಆಯೋಜಿಸಿದೆ. 


 ನಾಲ್ಕು ದಿನ ನಡೆಯುವ ಉತ್ಸವವನ್ನು ರಂಗಭೂಮಿ ಕಲಾವಿದ, ಸಾಹಿತಿ ರಮಾನಂದ ಐನಕೈ ಉದ್ಘಾಟಿಸಲಿದ್ದು  ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಪ್ರತಿದಿನ ರಾತ್ರಿ 8:00ಕ್ಕೆ ಒಟ್ಟು ಐದು ನಾಟಕಗಳು ಪ್ರದರ್ಶನಗೊಳ್ಳಲಿದೆ.
    ಫೆ.5ರಂದು ಲಾವಣ್ಯ ಬೈಂದೂರು ಪ್ರಸ್ತುತಪಡಿಸುವ ಯೋಗೀಶ್ ಬಂಕೇಶ್ವರ್ ನಿರ್ದೇಶನದ 'ಮುದ್ದಣನ ಪ್ರಮೋಷನ್ ಪ್ರಸಂಗ' ನಾಟಕ ಪ್ರದರ್ಶನಗೊಳ್ಳಲಿದೆ.
     ಫೆ.6ರಂದು ಕಿನ್ನರ ಮೇಳ ತುಮರಿಯ ಮೌನೇಶ ಬಡಿಗೇರ ನಿರ್ದೇಶನದ 'ಕೃಷ್ಣೇಗೌಡರ ಆನೆ'  ಮತ್ತು ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದ 'ಗೋಪಿ ಗವಾಯಿ ಭಾಗಾಭಜಂತ್ರಿ' ನಾಟಕ ಪ್ರದರ್ಶನಗೊಂಡರೇ ಫೆ.7ರಂದು ಚಿತ್ತಾರ ಬೆಂಗಳೂರು ಪ್ರಸ್ತುತಿಯ ರಾಜೇಂದ್ರ ಕಾರಂತ ನಿರ್ದೇಶನದ 'ಪಾವ್ ಬಾಜಿ' ನಾಟಕ ಪ್ರದರ್ಶನಗೊಳ್ಳಲಿದೆ.
   ಫೆ.8ರಂದು  ರಂಗಭೂಮಿ ಉಡುಪಿ ಪ್ರಸ್ತುತ ಪಡಿಸುವ ಪ್ರದೀಪ್ ಚಂದ್ರ ಕುತ್ಪಾಡಿ ನಿರ್ದೇಶನದ ಕಾಲಚಕ್ರ ನಾಟಕ ಪ್ರದರ್ಶನಗೊಳ್ಳಲಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com