ಮಾರಣಕಟ್ಟೆ ಹಬ್ಬ: ಸಾವಿರ ಸಂಖ್ಯೆಯಲ್ಲಿ ನೆರೆದ ಭಕ್ತ ಜನಸಾಗರ

 ಮಾರಣಕಟ್ಟೆ: ಇಲ್ಲಿನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ  ಆರಂಭಗೊಂಡ ಮಕರ ಸಂಕ್ರಮಣ ಉತ್ಸವದ ಕೆಂಡಸೇವೆ ಹಾಗೂ ಮಂಡಲ ಸೇವೆಯಲ್ಲಿ ತುಳುನಾಡು ಹಾಗೂ ಕುಂದನಾಡಿನ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದರೆ.
     ಕಾರಣೀಕ ಕ್ಷೇತ್ರವೆಂದು ಗುರುತಿಸಲಾಗಿರುವ ಮಾರಣಕಟ್ಟೆ ದೇವಸ್ಥಾನದ ಮಕರ ಸಂಕ್ರಮಣ ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರಿಗೆ ಬುಟ್ಟಿಯಲ್ಲಿ ಸೇವಂತಿಗೆ ಹೂವಿನ ಸೇವೆ ಹಾಗೂ ಕೆಂಡಸೇವೆಯಲ್ಲಿ ಪಾಲ್ಗೊಳ್ಳುವುದು ಬಹಳಷ್ಟು ವರುಷಗಳಿಂದ ನಡೆದುಕೊಂಡು ಬರುತ್ತಿರುವ ನಂಬಿಕೆಯ ಪರಂಪರೆಯಾಗಿದೆ. 
    ಉಡುಪಿ ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ ರ್ತಕ ಡಾ| ಜಿ. ಶಂಕರ್‌ ಅವರು ಸಮರ್ಪಿಸಿದ ಭೋಜನ ಶಾಲೆಯಲ್ಲಿ ನಿರಂತರವಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆದವು. ದೇವಳದ ಆನುವಂಶೀಯ ಮೊಕ್ತೇಸರ ಸಿ. ಸೀತಾರಾಮ ಶೆಟ್ಟಿ, ಸಿಬಂದಿ ವರ್ಗ ಹಾಗೂ ಅರ್ಚಕರು ದೇವಳಕ್ಕೆ ಬರುವ ಸಹಸ್ರಾರು ಭಕ್ತರಿಗೆ ಸಕಲ ಸೌಕರ್ಯ ಕಲ್ಪಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com