ಕಲಾ ಸ್ಪಂದನಾದ ವಾರ್ಷಿಕೋತ್ಸವ

ಮರವಂತೆ: ಕಲಾ ಸ್ಪಂದನ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಗುರುವಾರ ‘ಕಲಾ ಸಂಭ್ರಮ’ ಕಾರ್ಯಕ್ರಮ ನಡೆಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗೂರು ಕುಸುಮಾ ಹೋಮ್ಸ್‌ನ ಆಡಳಿತ ನಿರ್ದೇಶಕ ನಳಿನ್‌ಕುಮಾರ ಶೆಟ್ಟಿ ಎಳೆಯರ ಪ್ರತಿಭೆ ವಿಕಾಸವಾದರೆ ಮಾತ್ರ ಸಮಾಜದ ಉನ್ನತಿ ಸಾಧ್ಯವಾಗುತ್ತದೆ. ಅದಕ್ಕಾಗಿ ಸಂಘಟನೆಗಳು ಅದಕ್ಕೆ ಪೂರಕವಾಗುವ ಸಾಂಸ್ಕೃತಿಕ ಮುನ್ನೋಟವನ್ನೊಳಗೊಂಡ, ಮೌಲಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬೇಕು ಎಂದರು.
      ಮುಖ್ಯ ಅತಿಥಿಯಾಗಿದ್ದ ಶಿಕ್ಷಕ ಎಂ. ಶಂಕರ ಬಿಲ್ಲವ ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಲು ಕಲಾ ಚಟುವಟಿಕೆಗಳು ಸಹಕಾರಿ ಎಂದರು.  ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ, ಕುಂದಾಪುರದ ಲಹರಿ ಮ್ಯೂಸಿಕಲ್ಸ್ ಕಲಾವಿದರಿಂದ ಸಂಗೀತ ರಸಮಂಜರಿ ನಡೆದುವು.
      ಸತೀಶ ಮಧ್ಯಸ್ಥ ಸ್ವಾಗತಿಸಿ, ರಾಘವೇಂದ್ರ ಆಚಾರ್‍ಯ ವಂದಿಸಿದರು. ಹರೀಶ ಮರವಂತೆ ಮತ್ತು ಮನೋಹರ ಉಪ್ಪುಂದ ನಿರೂಪಿಸಿದರು. ಬಿ. ನಾಗೇಶ ಶೇಟ್, ಶ್ರೀಧರ ಮರವಂತೆ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com