ನಾವುಂದ: ಬಡಾಕೆರೆ ಗ್ರಾಮದ ನಾಗಯಕ್ಷೀ ಪಾತ್ರಿಗಳಾದ ವೇ|ಮೂ| ಲೋಕೇಶ ಅಡಿಗ ಅವರ ಮೂಲನಾಗದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಫೆ. 3 ಮತ್ತು 4ರಂದು ಜರಗಲಿರುವ ಸಹಸ್ರ ಚಂಡೀಯಾಗ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ ಜ. 7ರಂದು ಬೆಳಗ್ಗೆ 8 ಗಂಟೆಗೆ ನೆರವೇರಲಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಮಾಜಿ ಧರ್ಮದರ್ಶಿ ಬಿ. ಸುಕುಮಾರ ಶೆಟ್ಟಿ ಚಪ್ಪರಮುಹೂರ್ತ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
0 comments:
Post a Comment