ಮರವಂತೆ: ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ನಾಗನಾಗಿದ್ದಾನೆ, ಮನುಷ್ಯ ನಿರಂತರವಾಗಿ ನಾಗನ ಸೇವೆ ನೇರವೇರಿಸುವುದರಿಂದ ಸಕಲ ಇಷ್ಟಾರ್ಥ ಸಿದ್ಧಿಸುವುದಲ್ಲದೇ, ಮನಃಶಾಂತಿಯು ಲಭಿಸಲಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ನಾವುಂದ ಬಡಾಕೆರೆ ಗ್ರಾಮದ ನಾಗಯಕ್ಷಿ ಪಾತ್ರಿ ವೇದಮೂರ್ತಿ ಲೋಕೇಶ ಅಡಿಗರ ನೇತತ್ವದಲ್ಲಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಫೆ. 3ರಿಂದ 4 ರವರೆಗೆ ನಡೆಯುವ ಸಹಸ್ರ ಚಂಡಿಕಾಯಾಗ ಮತ್ತು ಅಷ್ಟ ಪವಿತ್ರ ನಾಗಮಂಡಲೋತ್ಸವಕ್ಕೆ, ಬುಧವಾರ ಚಪ್ಪರ ಮೂಹೂರ್ತ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕ ಕಲ್ಯಾಣಾರ್ಥವಾಗಿ ನಡೆಯುವ ಸಹಸ್ರ ಚಂಡಿಕಾ ಯಾಗ ಮತ್ತು ನಾಗಮಂಡಲೋತ್ಸವದಿಂದ ಈ ಪರಿಸರಕ್ಕೆ ಹೊಸ ಕಳೆ ಬರುವುದಲ್ಲದೇ, ಈ ಪ್ರದೇಶ ಸುಭಿಕ್ಷೆಯತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಪಂಚಯತ್ ಸದಸ್ಯ ರಾಜು ಪೂಜಾರಿ, ನಾಗಯಕ್ಷಿ ಪಾತ್ರಿ ವೇದಮೂರ್ತಿ ಲೋಕೇಶ ಅಡಿಗ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment