ಎರಡೂವರೆ ವರ್ಷದ ಮಗುವಿಗೆ ಬೆನ್ನುಹುರಿ ಕ್ಯಾನ್ಸರ್‌: ನೆರವಿಗೆ ಮನವಿ

ಸಿದ್ದಾಪುರ: ಬಡ ಪುಟ್ಟ ಸಂಸಾರ ಕ್ಯಾನ್ಸರ್‌ ಕಾಯಿಲೆಯ ಔಷಧೋಪಚಾರಕ್ಕಾಗಿ ಆರ್ಥಿಕ ಸಹಾಯವನ್ನು ನಿರೀಕ್ಷಿಸುತ್ತಿದೆ. ಎರಡೂ ವರೆ ವರ್ಷದ ಪುಟ್ಟ ಮಗು ಬೆನ್ನುಹುರಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಈ ರೋಗ ನಿವಾರಣೆಗೆ ವೈದ್ಯಲೋಕ ಸಿದ್ಧವಿದ್ದರೂ ಬಡ ಪುಟ್ಟ ಸಂಸಾರಕ್ಕೆ ಮಾತ್ರ ಇದು ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಯಳಂತೂರು ಹೊಸಗದ್ದೆಮನೆ ನಿವಾಸಿಯಾಗಿರುವ ಟ್ಯಾಕ್ಸಿ ಚಾಲಕ ಅರುಣ್‌ ಶೆಟ್ಟಿ ಅವರ ಎರಡೂವರೆ ವರ್ಷದ ಪುತ್ರಿ ಅನುಶ್ರೀ ಶೆಟ್ಟಿಯೇ ಬೆನ್ನುಹುರಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ನತದೃಷ್ಟ ಮಗು. ಹುಟ್ಟಿದ ಎರಡು ವರ್ಷದವರೆಗೆ ಆಡಿ ಬೆಳೆದುಕೊಂಡಿದ್ದ ಮಗು, ಇತ್ತೀಚಿನ ಆರು ತಿಂಗಳ ಹಿಂದೆ ಕಾಲು ನಡುಗಲು ಪ್ರಾರಂಭಗೊಂಡಿತ್ತು. ಅನಂತರ ನಡೆದಾಡಲು ಆಗದೇ ಮಲಗಿದ್ದಲ್ಲೆ ಇದ್ದು, ಈಗ ಎತ್ತಿಕೊಂಡೆ ತಿರುಗುವಂತಹ ಪರಿಸ್ಥಿತಿ ಎದುರಾಗಿದೆ.

ಈ ಮಗುವಿಗೆ ಈ ಹಿಂದೆ ಸುಮಾರು 1ಲಕ್ಷ ರೂ. ಖರ್ಚು ಮಾಡಿ, ಮಣಿಪಾಲದಲ್ಲಿ ಆಪರೇಶನ್‌ ಮಾಡಿದರು. ಅನಂತರ ಬೆನ್ನು ಹುರಿ ಹತ್ತಿರ ಗಡ್ಡೆ ಬೆಳೆದಿದ್ದು, ಅದರ ಔಷಧೋಪಚಾರಕೆ ಸುಮಾರು ರೂ. 1. 50 ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಿದ್ದಾರೆ. ಈಗ ಪುನಃ ನ್ಯೂಯೊ ಬ್ಲಾಸ್ಟೋಮಾ ವಿತ್‌ ಒಪೊಕ್ಲೋನಸ್‌ ಮೈಯೋಕ್ಲೋನಸ್‌ ಸಿಂಡ್ರೋಮಾ ಆ್ಯಂಡ್‌ ರಿಕ್ವೇರಿಸ್‌ ಸರ್ಜರಿಗೆ ಸುಮಾರು ರೂ. 3 ಲಕ್ಷ ವೆಚ್ಚ ತಗಲು ತ್ತದೆ ಎಂದು ಮಣಿಪಾಲದ ಕೆ‌ಎಂಸಿ ವೈದ್ಯರು ಹೇಳುತ್ತಾರೆ.

ಟ್ಯಾಕ್ಸಿ ಚಾಲಕರಾಗಿ ದುಡಿಯು ತ್ತಿರುವ ಅರುಣ್‌ ಶೆಟ್ಟಿ ನನ್ನ ದುಡಿಮೆ ಯಿಂದಲೇ ಸಂಸಾರ ಸಾಗಬೇಕಾಗಿದ್ದು, ಈಗಾಗಲೇ ಸಾಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ಮಗಳಿಗೆ ಚಿಕ್ಸಿತ್ಸೆ ನೀಡಿರುತ್ತಾರೆ. ಆದರೆ ಈಗ ಮತ್ತೇ 3ಲಕ್ಷ ರೂ., ಖರ್ಚು ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಸಹೃದಯಿಗಳು ಈ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಈ ಮುಗ್ಧ ಮಗುವಿನ ಪ್ರಾಣ ಉಳಿಸಬೇಕಾಗಿದೆ.

ಆರ್ಥಿಕ ಸಹಾಯ ನೀಡುವ ಸಹೃದಯಿಗಳು ಮತ್ತು ಸಂಘ ಸಂಸ್ಥೆಯವರು ಈ ವಿಳಾಸಕ್ಕೆ ಸಂಪರ್ಕಿಸಬಹುದು.

ಅರುಣ್‌ ಶೆಟ್ಟಿ ತಂದೆ ಮೋನಪ್ಪ ಶೆಟ್ಟಿ, 
ಯಳಂತೂರು ಹೊಸಗದ್ದೆ ಮನೆ, ಬೆಳ್ವೆ ಪೋಸ್ಟ್‌,
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ – 576212
ಮೊಬೈಲ್: 9449770513
ಅಥವಾ ಕರ್ಣಾಟಕ ಬ್ಯಾಂಕ್‌ ಗೋಳಿಯಂಗಡಿ ಶಾಖೆಯ 
ಉಳಿತಾಯ ಖಾತೆ 2742500100117601 (ಐ‌ಎಫ್‌ಎಸ್‌ಸಿ- ಕೆ‌ಎ‌ಆರ್‌ಬಿ-0000274)ಗೆ ಜಮಾ ಮಾಡಬಹುದಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com