ಮೀನುಗಾರರ ಸಮಾವೇಶದ ಪೂರ್ವಭಾವಿ ಸಭೆ

ಉಪ್ಪುಂದ: ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ನಡೆಯಲಿರುವ  ಬೃಹತ್ ಮೀನುಗಾರರ ಸಮಾವೇಶದ  ಪೂರ್ವಭಾವಿ ಸಭೆ   ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.

ಬೈಂದೂರು ವಲಯ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಕುಮಾರ ಖಾರ್ವಿ ಸಭೆಯ ಅಧ್ಯಕ್ಷತೆ ವಹಿಸಿ ಸಮಾವೇಶದಲ್ಲಿ ರೀತಿನೀತಿಗಳ ಬಗ್ಗೆ ವಿವರಿಸಿ ಸದಸ್ಯರೊಂದಿಗೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಿದರು.

ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರ ಸಂಘದ ಅದ್ಯಕ್ಷ ಮಂಜು ಬಿಲ್ಲವ, ಉಪ್ಪುಂದ ಸಂಘದ ಗೌರವಾಧ್ಯಕ್ಷರಾದ ನವೀನ್‌ಚಂದ್ರ, ಮದನ್ ಕುಮಾರ್, ಕಾರ್ಯದರ್ಶಿ ಶೇಖರ್ ನಾವುಂದ, ಮಾಜಿ ಅಧ್ಯಕ್ಷ ರಾಮಚಂದ್ರ, ತಾಪಂ ಸದಸ್ಯ ಪ್ರಸನ್ನ ಕುಮಾರ್, ಗ್ರಾಪಂ ಅಧ್ಯಕ್ಷ ಜಗನ್ನಾಥ ಕೆ., ಶಿರೂರು ವಲಯ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ನಾರಾಯಣ ಮೊಗವೀರ, ಅಲ್ಪಸಂಖ್ಯಾತ ಮೀನುಗಾರ ಸಂಘದ ಅಧ್ಯಕ್ಷ ಸಾಹುಲ್ ಶಿರೂರು ಮುಂತಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com