ಮಕ್ಕಳ ಫೋಟೋ ಸ್ಪರ್ಧೆ 2014ರ ಬಹುಮಾನ ವಿತರಣೆ


ಕುಂದಾಪುರ: ಇಲ್ಲಿನ coondapur.com ಆಯೋಜಿಸಿದ ಮಕ್ಕಳ ಫೋಟೋ ಸ್ಪರ್ಧೆ 2014ರ ವಿಜೇತರಿಗೆ  ಬಹುಮಾನ ವಿತರಣಾ ಕಾರ್ಯಕ್ರಮವು ಟಾರ್ಗೆಟ್ ವೃತ್ತಿ ಮಾರ್ಗದರ್ಶನ ಹಾಗೂ ಸರಸ್ವತಿ ಗ್ರೂಪ್ ಆಫ್  ಇನ್ಸ್ಟಿಟ್ಯೂಟ್  ಸಹಯೋಗದಲ್ಲಿ  ಕಲಾಮಂದಿರದಲ್ಲಿ ಜರುಗಿತು.
    ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಎಂ, ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಉದ್ಯಮಿಗಳಾದ ಮಂಜುನಾಥ್ ಕಾಮತ್ ಕುಂಬಾಶಿ, ಕಾರ್ತಿಕ್ ತಂತ್ರಿ, ಆದರ್ಶ ಕೆ ಉಪಸ್ಥಿತರಿದ್ದರು.
      ಫ್ಯಾಷನ್ ಕೋರ್ಟ್ ಕುಂದಾಪುರದ ಕಾರ್ತಿಕೇಯ ಮಧ್ಯಸ್ಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯನ್ನು 3 ವಿವಿಧ ವಯೋಮಾನದ ಮಕ್ಕಳಿಗಾಗಿ ನಡೆಸಲಾಗಿತ್ತು. ವಿಜೇತರನ್ನು ಗರಿಷ್ಠ ಫೆಸ್ಬುಕ್ ಲೈಕ್ ಮತ್ತು ಮಕ್ಕಳ ಸೌಂದರ್ಯದ ಅನುಗುಣವಾಗಿ ಆರಿಸಲಾಗಿತ್ತು.
    ಸರಸ್ವತಿ ಗ್ರೂಪ್ ಆಫ್  ಇನ್ಸ್ಟಿಟ್ಯೂಟ್ ನ ರಿತೇಶ್ ಕಾಮತ್ ಸ್ವಾಗತಿಸಿದರು. ವಿ ಗೌತಮ್ ನಾವಡ ವಿಜೇತರ ಪಟ್ಟಿಯನ್ನು ವಾಚಿಸಿದರು. ಹರ್ಷಾ ಎಸ್ ಶೇಟ್ ನಿರೂಪಿಸಿ ವಂದಿಸಿದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com