ಜ.4: ಎಸ್‌ಎಫ್ಐ ಕುಂದಾಪುರ ತಾಲೂಕು ಸಮ್ಮೇಳನ

ಕುಂದಾಪುರ: ಭಾರತ ವಿದ್ಯಾರ್ಥಿ ಫೆಡರೇಷನ್ ಕುಂದಾಪುರ ಇದರ ತಾಲೂಕು ಸಮ್ಮೇಳನ ಜನವರಿ 4ರಂದು ನಗರದ ಕಾರ್ಮಿಕ ಭವನದಲ್ಲಿ ನಡೆಯಲಿದೆ.
   ಲೇಖಕ ಡಾ. ಜಿ. ಭಾಸ್ಕರ ಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದು ಎಸ್ಎಫ್ಐ ತಾಲೂಕು ಅಧ್ಯಕ್ಷರಾದ ಗಣೇಶ್ ದಾಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಎಸ್ಎಫ್ಐ ಮಾಜಿ ಮುಖಂಡ ನಾಸಿರ್ ಬಿ.ಎಂ, ಡಿವೈಎಫ್ಐ ಸಂಘಟನೆಯ ರಾಜೇಶ ವಡೇರಹೋಬಳಿ, ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಮತ್ತು ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಉಪಸ್ಥಿರಿರುವರು.
   ರತ್ನ ಕೊಠಾರಿ ನಿಗೂಢ ಸಾವಿನ ಪ್ರಕರಣದ ಶೀಘ್ರ ಇತ್ಯರ್ಥ, ಖಾಸಗಿ ಕಾಲೇಝು ಡೊನೇಷನ್ ಹಾವಳಿ ತಡೆಗಟ್ಟುವುದು, ಜಿಲ್ಲಾ ಶಿಕ್ಷಣ  ನಿಯಂತ್ರಣ ಪ್ರಾಧಿಕಾರ, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ, ಹಾಸ್ಟೆಲ್‌ಗಳ ಬಲವರ್ಧನೆ ಮತ್ತು ಶಿಕ್ಷಣ ಪದ್ದತಿಯ ಆಮೂಲಾಗ್ರ ಬದಲಾವಣೆ ಮುಂತಾದ ಆಗ್ರಹಗಳೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com