ಸಂಭ್ರಮದಿ ಜರುಗಿದ ಗುರುನರಸಿಂಹ ದೇವರ ಮನ್ಮಹಾರಥೋತ್ಸವ

ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ದೇವಸ್ಥಾನದ ಮನ್ಮಹಾರಥೋತ್ಸವ ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಂಭ್ರಮದಿಂದ ಜರುಗಿತು. 
    ಸಹಾಸ್ರಾರು ಭಕ್ತರು ಗುರುನರಸಿಂಹ ಮತ್ತು ಆಂಜನೇಯ ಸ್ವಾಮಿಯ ದರ್ಶನ ಪಡೆದು ಬ್ರಹ್ಮರಥ ಎಳೆದು ಭಕ್ತಿ-ಭಾವಗಳಿಂದ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ಪ್ರಯುಕ್ತ ವಿಶೇಷ ಪಾನಕ ವ್ಯವಸ್ಥೆ, ಅನ್ನ ಸಂತರ್ಪಣೆ, ಪನಿವಾರ ವಿತರಣೆ ನಡೆಯಿತು. 
     ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಎ. ಜಗದೀಶ ಕಾರಂತ, ಉಪಾಧ್ಯಕ್ಷ ಭಾಸ್ಕರ ನಾವುಡ, ಕಾರ್ಯದರ್ಶಿ ಆನಂದರಾಮ ಮಧ್ಯಸ್ಥ, ಕೋಶಾಧಿಕಾರಿ ವೈ. ಸದಾರಾಮ ಹೇರ್ಳೆ, ಸದಸ್ಯರಾದ ಕೆ. ಯಜ್ಞನಾರಾಯಣ ಹೇರ್ಳೆ, ನಾಗರಾಜ ಬಿ., ವೇ.ಮೂ.ಕೆ. ಅನಂತಪದ್ಮನಾಭ ಐತಾಳ, ಎ ಚ್. ಧರ್ಮರಾಯ ಹಂದೆ, ಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು. 
     ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಾರಂಪಳ್ಳಿ ರಾಮಚಂದ್ರ ಐತಾಳ್ ಮತ್ತು ಸಂಗಡಿಗರಿಂದ ವೀಣಾವಾದನ, ದೇವಸ್ಥಾನದ ತೆರೆದ ರಂಗ ಮಂಟಪದಲ್ಲಿ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ಜರುಗಿತು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ. ಸಾಧು, ಉಪಾಧ್ಯಕ್ಷೆ ಸುಲತಾ ಹೆಗ್ಡೆ, ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್, ಮಾಜಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com