ಶಂಕರನಾರಾಯಣ ತಾಲೂಕು ರಚನೆಗೆ ಆಗ್ರಹಿಸಿ ಅಂಚೆ ಕಾರ್ಡ್ ಚಳವಳಿ

ಶಂಕರನಾರಾಯಣ: ಶಂಕರನಾರಾಯಣ ತಾಲೂಕು ರಚನೆಗೆ ಆಗ್ರಹಿಸಿ ಸ್ಥಳೀಯ ತಾಲೂಕು ಹೋರಾಟ ಸಮಿತಿ ಹಮ್ಮಿ ಕೊಂಡಿರುವ ಅಂಚೆ ಕಾರ್ಡ್ ಚಳವಳಿಗೆ ಸೋಮವಾರ ಚಾಲನೆ ನೀಡಲಾಯಿತು.
      ಉಳ್ಳೂರು 74 ಗ್ರಾಮದ ಹಿರಿಯರು, ಶತಾಯುಷಿ ಬ್ರಹ್ಮನಜಡ್ಡು ತಿಮ್ಮಪ್ಪ ಶೆಟ್ಟಿ(105) ಶಂಕರನಾರಾಯಣ ಅಂಚೆ ಕಚೇರಿಗೆ ಆಗಮಿಸಿ ಅಂಚೆ ಕಾರ್ಡ್‌ನ್ನು ಅಂಚೆ ಪೆಟ್ಟಿಗೆಗೆ ಹಾಕುವ ಚಳವಳಿಗೆ ಚಾಲನೆ ಒದಗಿಸಿದರು.
      ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಚಿಟ್ಟೆ ರಾಜಗೋಪಾಲ ಹೆಗ್ಡೆ, ಆವರ್ಸೆ ರತ್ನಾಕರ ಶೆಟ್ಟಿ, ಕಟ್ಟಿನಬೈಲು ಚಂದ್ರಶೇಖರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಗಣಪತಿ ಶೇಟ್, ಹೆಚ್.ಬಿ. ರಾಜೀವ ಶೆಟ್ಟಿ, ರಾಜೇಶ್ ಹೆಬ್ಬಾರ್, ದಿನೇಶ್ ಪೂಜಾರಿ, ಶಾಂತರಾಮ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಪವನ್, ಯಶವಂತ್ ಶೆಟ್ಟಿ, ಶಿವಾನಂದ ವೈದ್ಯ, ನಾರಾಯಣ ಶೆಟ್ಟಿಗಾರ್, ರಾಘವೇಂದ್ರ ಆಚಾರ್,ಪಂಜು ಪೂಜಾರಿ, ಮಹಾದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು. 15 ಸಾವಿರ ಅಂಚೆ ಕಾರ್ಡ್‌ಗಳನ್ನು ಮುಖ್ಯಮಂತ್ರಿ ರವಾನಿಸುವ ನಿಟ್ಟಿನಲ್ಲಿ ಚಳವಳಿ ಹಮ್ಮಿಕೊಳ್ಳಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com