ಶಿರೂರು ಫಿಶ್‌ ನೆಟ್‌ ಶೆಡ್‌ ಕಾಮಗಾರಿಗೆ ಚಾಲನೆ

ಶಿರೂರು: ಬಂದರು ಮತ್ತು ಮೀನುಗಾರಿಕಾ ಉಪವಿಭಾಗ ಉಡುಪಿ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಿಫಾರಸಿನ ಮೇರೆಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನಿನ ಬಲೆ ನೇಯುವ ನಿರ್ಮಾಣ ಕಾಮಗಾರಿಯನ್ನು ಶಿರೂರು ಅಳ್ವೆ ಗದ್ದೆಯಲ್ಲಿ  ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ಉಡುಪಿ ಜಿ.ಪಂ. ಶಿಕ್ಷಣ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಸದಸ್ಯ ಸಾವಿತ್ರಿ ಅಳ್ವೆಗದ್ದೆ, ಶಿರೂರು ಗ್ರಾ.ಪಂ. ಅಧ್ಯಕ್ಷ ರಾಮ ಮೇಸ್ತ, ಇಲಾಖಾ ಅಧಿಕಾರಿ ರಾಥೋಡ್‌, ಕಾರ್ಯ ನಿರ್ವಾಹಕ ಅಭಿಯಂತರ  ಎಂ.ಡಿ. ಪ್ರಸಾದ, ಮಂಗಳೂರು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ನಾಗರಾಜ್‌, ಗುತ್ತಿಗೆದಾರ ಗುರುಪ್ರಸಾದ ಶೆಟ್ಟಿ ಯಡೇರಿ, ವಿಜಯ ಕುಮಾರ್‌ ಶೆಟ್ಟಿ, ಮಹೇಂದ್ರ ಪೂಜಾರಿ ಯಡೇರಿ, ರಾಜೇಶ ಶೆಟ್ಟಿ, ಜೆ.ಪಿ.ಶೆಟ್ಟಿ ಹಳಗೇರಿ ಉಪಸ್ಥಿತರಿದ್ದರು.

ಮಾಜಿ ತಾ.ಪಂ. ಸದಸ್ಯ ನಾರಾಯಣ ಅಳ್ವೆಗದ್ದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com