ಶುಭದಾ ಶಾಲೆಗೆ ಗ್ಲೋಬಲ್ ಎಜ್ಯುಕೇಶನ್ ಲೀಡರ್ ಶಿಫ್ ಅವಾರ್ಡ್

ನಾವುಂದ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ನಾವುಂದ  ಶುಭದಾ ಆಂಗ್ಲ ಮಾಧ್ಯಮ ಶಾಲೆಗೆ  ಥೈಲ್ಯಾಂಡ್ ಇಕಾನಮಿಕ್ ಗ್ರೂಫ್ ಸೊಸೈಟಿ ಆಫ್ ಇಂಡಿಯಾ (ಇ.ಜಿ.ಎಸ್.ಐ) ಗ್ಲೋಬಲ್ ಎಜ್ಯುಕೇಶನ್ ಲೀಡರ್ ಶಿಫ್ ಅವಾರ್ಡ್ ದೊರೆತಿದೆ. ಥೈಲ್ಯಾಂಡನ್ ರಾಜಧಾನಿ ಬ್ಯಾಂಕಾಕ್ ಹಾಲಿಡೇ ಇನ್ ಸಿಲಾಮ್ ರೋಡ್ ಕ್ರಿಸ್ಟಲ್ ಬಾಲ್ ರೂಮ್‌ನಲ್ಲಿ ನಡೆದ ಭಾರತ-ಥ್ಯಾಲೆಂಡ್ ಫ್ರೆಂಡ್‌ಶಿಫ್ ಬ್ಯಾಂಕ್ವೆಟ್ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಶುಭದಾ ಶಾಲೆಯ ಸಂಸ್ಥಾಪಕ ಎನ್.ಕೆ.ಬಿಲ್ಲವ ಹಾಗೂ ಟ್ರಸ್ಟಿ ಬಿ.ಎ. ರಜಾಕ್ ಪ್ರಶಸ್ತಿ ಸ್ವೀಕರಿಸಿದರು. ಥೈಲ್ಯಾಂಡ್ -ಭಾರತ ಭಾಂಧವ್ಯ ವೃದ್ದಿ ಹಾಗೂ ಶಿಕ್ಷಣ, ಆರೋಗ್ಯ,ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದವರ ಗೌರವಿಸುವ ಹಾಗೂ ಪರಸ್ಪರ ವ್ಯವಹಾರಿಕ ಬಾಂಧವ್ಯ ವೃದ್ದಿಸುವ ನೆಲೆಯಲ್ಲಿ ಪ್ರತಿವರ್ಷ ಸಮ್ಮೇಳನ ಆಯೋಜಿಸಲಾಗುತ್ತದೆ. ಗ್ರಾಮೀಣ ಭಾಗದ ಶೈಕ್ಷಣಿಕ ಕ್ರಾಂತಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶುಭದಾ ಶಿಕ್ಷಣ ಸಂಸ್ಥೆ  ಈ ಗೌರವಕ್ಕೆ ಪಾತ್ರವಾಗಿದೆ. ಶುಭದಾ ಶಾಲೆ ಪ್ರತಿವರ್ಷ ಶೇ 100 ಫಲಿತಾಂಶಗಳಿಸುತ್ತಿದೆ. ಹಾಗೂ ಉಡುಪಿ ಜಿಲ್ಲೆಯ ಅತ್ಯುತ್ತಮ ಶಾಲೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ.

ಥೈಲ್ಯಾಂಡ್ ಮಾಜಿ ಉಪ ಪ್ರಧಾನಿ ಕೋರ್ನ್ ಡೆಬರನ್ಸಿ ಪ್ರಶಸ್ತಿ ವಿತರಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com