ವಾರಾಹಿ ನೀರಿಗಾಗಿ ನಿರಂತರ ಹೋರಾಟ: ಕೆ.ಪ್ರತಾಪಚಂದ್ರ ಶೆಟ್ಟಿ

ಕುಂದಾಪುರ: ಡಿಸೆಂಬರ್ ಅಂತ್ಯದೊಳಗೆ ವಾರಾಹಿ ಕಾಲುವೆಗೆ ನೀರು ಹಾಯಿಸುವುದಾಗಿ ಭರವಸೆ ನೀಡಿದ್ದ ನೀರಾವರಿ ಸಚಿವ ಮತ್ತು ಉಸ್ತುವಾರಿ ಸಚಿವರ ಮಾತು ಹುಸಿಯಾಗಿದೆ. ಕಾಲುವೆಯಲ್ಲಿ ನೀರು ಹರಿಸುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ಉಡುಪಿ ಜಿಲ್ಲಾ ರೈತ ಸಂಘ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು. 
      ಸಿದ್ಧಾಪುರದಲ್ಲಿರುವ ವಾರಾಹಿ ನೀರಾವರಿ ನಿಗಮ ಕಚೇರಿ ಎದುರು ಉಡುಪಿ ಜಿಲ್ಲಾ ರೈತ ಸಂಘ ವಾರಾಹಿ ನೀರಿಗಾಗಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು. ಯೋಜನೆಯ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಗುತ್ತಿಲ್ಲ. ಇದರ ಹೊಣೆ ಹೊರಬೇಕಾದವರು ಯಾರು ಎಂಬ ಪ್ರಶ್ನೆಗೆ ಆಳುವ ಸರಕಾರ, ರಾಜಕೀಯ ಪಕ್ಷಗಳು ಉತ್ತರ ನೀಡಬೇಕು. ಈ ಹೋರಾಟ ಪಕ್ಷಾತೀತವಾಗಿದೆ. ಇದು ರೈತರ ಹೋರಾಟ. 35 ವರ್ಷಗಳ ಕಾಲ ಶಾಸಕನಾಗಿದ್ದ ಸಂದರ್ಭ ಪ್ರಸ್ತುತ ಈಗಲೂ ವಾರಾಹಿ ಕುರಿತು ಆಯಾ ವೇದಿಕೆಯಲ್ಲಿ ಧ್ವನಿಯೆತ್ತಿದ್ದೇನೆ ಎಂದು ಹೇಳಿದರು.    
     ಯೋಜನೆಗೋಸ್ಕರ ರೈತರು ಭೂಮಿ ಕಳೆದುಕೊಂಡಿದ್ದಾರೆ. ಸಂತ್ರಸ್ತರ ರೈತರ ನೋವು ಕೇಳುವವರಿಲ್ಲ. ಈಗ ಕೇವಲ 18 ಗ್ರಾಮಗಳಿಗೆ ನೀರುಣಿಸುವುದಾಗಿ ನೀರಾ ವರಿ ನಿಗಮ ಹೇಳುತ್ತಿದೆ. ಯೋಜನೆಯನ್ನೇ ನಂಬಿಕೊಂಡು ಆರಂಭಗೊಂಡ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿ ಕೊಂಡಿದೆ. ಒಂದು ತಲೆಮಾರು ಕಳೆದು ಹೋಗಿದೆ. ಇನ್ನೊಂದು ತಲೆಮಾರಿಗಾ ದರೂ ವಾರಾಹಿ ನೀರು ಸಿಗಲೇಬೇಕು. ವಿದ್ಯಾರ್ಥಿ ಗಳು, ಎಲ್ಲ ಸ್ತರದ ಜನಪ್ರತಿನಿಧಿಗಳು, ರೈತರು ಭಾಗವಹಿಸಿದ್ದಾರೆ. ಹೋರಾಟ ದಡ ಮುಟ್ಟಿಸುವ ತನಕ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. 
     ವಾರಾಹಿ ಯೋಜನೆಯ ಸಂತ್ರಸ್ತ ಕುಟುಂಬ ಉಳ್ಳೂರು 74 ಗ್ರಾಮದ ಕುಮಾರ ಶೆಟ್ಟಿ ಮತ್ತು ಸಾಧು ಶೆಟ್ಟಿಯವರ ಪುತ್ರಿ ಚೈತ್ರಾ ಶೆಟ್ಟಿ ಮಹಾತ್ಮಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆಗೈಯುವ ಮೂಲಕ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.ಜಿಪಂ ಸದಸ್ಯ ಗಣಪತಿ ಟಿ.ಶ್ರೇಯಾನ್, ತಾಪಂ ಸದಸ್ಯ ರಾಜು ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಹಿರಿಯ ಕಷಿಕ ಜಯಶೀಲ ಶೆಟ್ಟಿ, ಪತ್ರಕರ್ತ ರಾಜೇಶ್ ಕೆ.ಸಿ. ಸಭೆಯನ್ನುದ್ದೇಶಿಸಿ ಮಾತನಾಡಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com