ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಸಿದ್ದಾಪುರ: ಉಳ್ಳೂರು-74ನೇ ಗ್ರಾಮದ ಅನೇಕ ರಸ್ತೆಗಳ ಅಭಿವೃದ್ಧಿಗೆ ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. 

ಬಳಿಕ ಉಳ್ಳೂರು ಸರಕಾರಿ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ವೀರಾಜಪೇಟೆ ರಾಜ್ಯ ಹೆದ್ದಾರಿಯ ಶಂಕರನಾರಾಯಣದ ಬಳಿ 2.50 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ, ಕುಳ್ಳುಂಜೆ ಗ್ರಾಮದ ಬೆದ್ರಕಟ್ಟೆಯಿಂದ ಹೆಬ್ಬಾಡಿ ರಸ್ತೆ ಅಭಿವೃದ್ಧಿ ( 50 ಲಕ್ಷ ರೂ.), ಸಿಂಗಿನಕೊಡ್ಲುನಿಂದ ಬಾಡಿಗೇರ ಜೆಡ್ಡು ರಸ್ತೆ ಅಭಿವೃದ್ಧಿ (54 ಲಕ್ಷ ರೂ.), ಹೊಸಬಾಳು ರಸ್ತೆ ಅಭಿವೃದ್ಧಿಗೆ (50 ಲಕ್ಷ ರೂ.), ಉಳ್ಳೂರು ಬೇಡಕೊಡ್ಲು ರಸ್ತೆ ಅಭಿವೃದ್ಧಿ(23 ಲಕ್ಷ ರೂ.), ಉಳ್ಳೂರು ಸರ್ಕಲ್‌ನಿಂದ ಗಾಣಜೆಡ್ಡು ರಸ್ತೆ ಅಭಿವೃದ್ಧಿ (75 ಲಕ್ಷ ರೂ.), ಬೆಳಾರಜೆ ಡ್ಡು ಎಸ್‌ಸಿ ಕಾಲೋನಿ ಯಿಂದ ಉಳ್ಳೂರು ತನಕ ರಸ್ತೆಗಳ ಅಭಿವೃದ್ಧಿ(27 ಲಕ್ಷ ರೂ.) ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲಾಯಿತು. 

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಯು. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಮತಾ ಆರ್ ಶೆಟ್ಟಿ, ತಾ.ಪಂ. ಸದಸ್ಯೆ ಪಾರ್ವತಿ ಕುಲಾಲ, ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ, ಮಾಜಿ ಜಿಪಂ ಸದಸ್ಯ ದೇವಾನಂದ ಶೆಟ್ಟಿ ಬಸ್ರೂರು, ಸಿದ್ದಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ವಳಾಲು ಉಪಸ್ಥಿತರಿದ್ದರು. ಸಿದ್ದಾಪುರ ಗ್ರಾಪಂ ಕಾರ್ಯದರ್ಶಿ ಶ್ರೀಧರ ಕಾಮತ್ ಸ್ವಾಗತಿಸಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಸಂಜೀವ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ಸದಾಶಿವ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com