ಆಗಸದಲ್ಲಿ ಬುಧ ಶುಕ್ರ ಜೋಡಿ

ಉಡುಪಿ: ಬಾನಿನ ಪಶ್ಚಿಮದಲ್ಲಿ ಬುಧ ಮತ್ತು ಶುಕ್ರ ಗ್ರಹಗಳು ಅತಿ ಹತ್ತಿರದಲ್ಲಿ ಭಾನುವಾರದಿಂದ ಕಾಣಿಸಿಕೊಂಡಿದ್ದು, ಇನ್ನು ನಾಲ್ಕೈದು ದಿನಗಳವರೆಗೆ ಈ ಸೊಬಗು ಆಕಾಶ ವೀಕ್ಷಕರಿಗೆ ನೋಡಲು ಸಿಗಲಿದೆ.ಇಂಥ ಸನ್ನಿವೇಶಗಳು ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ಬುಧ ಮತ್ತು ಶುಕ್ರನಿಂದ ಸ್ವಲ್ಪ ದೂರದಲ್ಲಿ ಮಂಗಳವನ್ನೂ ನೋಡಬಹುದು. ಅಲ್ಲದೆ ಪೂರ್ವದಲ್ಲಿ ಗುರು ಗ್ರಹವನ್ನು ನೋಡಬಹುದು. ಮೋಡವಿಲ್ಲದ ಶುಭ್ರ ದಿಗಂತದಲ್ಲಿ ಕಾಣಿಸುವ ಈ ಸೊಬಗನ್ನು ಖಗೋಳ ವೀಕ್ಷಕರು ನೋಡಬಹುದು ಎಂದು ಭೌತಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ. 
10-01-2015
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com