ರಾಷ್ಟ್ರ ಮಟ್ಟದ ಅಂಚೆಚೀಟಿ ವಿನ್ಯಾಸ ಸ್ಪರ್ಧೆ

ಉಡುಪಿ: ಸ್ವಾತಂತ್ರ್ಯ ದಿನದ ಅಂಗವಾಗಿ ಅಂಚೆ ಇಲಾಖೆ ಮಹಿಳಾ ಸಶಕ್ತೀಕರಣ ವಿಷಯದಲ್ಲಿ ರಾಷ್ಟ್ರ ಮಟ್ಟದ ಅಂಚೆಚೀಟಿ ವಿನ್ಯಾಸ ಸ್ಪರ್ಧೆ ಏರ್ಪಡಿಸಿದೆ.

ಜ. 1ರಿಂದ ಮಾ. 31ರ ತನಕ ವಿನ್ಯಾಸಗಳನ್ನು ಕಳುಹಿಸಬಹುದು. ವಿಜೇತ ವಿನ್ಯಾಸಗಳನ್ನು ಅಂಚೆಚೀಟಿ ಹಾಗೂ ಇನ್ನಿತರ ಅಂಚೆ ಸಾಮಗ್ರಿಗಳನ್ನು ಮುದ್ರಿಸಲು ಉಪಯೋಗಿಸಲಾಗುವುದು. ಮೊದಲ ಮೂರು ಬಹುಮಾನಗಳಿಗೆ 10,000 ರೂ., 6,000 ರೂ., 4,000 ರೂ. ನೀಡಲಾಗುವುದು.

ಇಂಕ್‌, ವಾಟರ್‌, ಕಲರ್‌, ಆಯಿಲ್‌ ಕಲರ್‌ ಅಥವಾ ಯಾವುದೇ ಮಾಧ್ಯಮ ಬಳಸಬಹುದು. ಕಂಪ್ಯೂಟರ್‌ ವಿನ್ಯಾಸಗಳಿಗೆ ಅವಕಾಶ ವಿರುವುದಿಲ್ಲ. ಯಾವುದೇ ಪೇಪರನ್ನು ಎ-4 ಗಾತ್ರದಲ್ಲಿ ಬಳಸಬಹುದಾಗಿದೆ. ವಿನ್ಯಾಸದ ಹಿಂಬದಿಯಲ್ಲಿ ಸ್ಪರ್ಧೆಯಲ್ಲಿ ಹೆಸರು, ಪ್ರಾಯ, ಮನೆಯ ಪೂರ್ಣ ವಿಳಾಸ, ಪಿನ್‌ ಕೋಡ್‌, ಮೊಬೈಲ್‌, ಇಮೇಲ್‌ ಐಡಿ ಬರೆದು ಸ್ಪೀಡ್‌ ಪೋಸ್ಟ್‌ ಮೂಲಕ ADG (Philately),Room No.108(B), Dak Bhavan, parliament street, New Delhi 110001 ಅವರಿಗೆ ಮಾ. 31ರೊಳಗೆ ಕಳುಹಿಸಿಕೊಡಬೇಕು.

ವಿವರಗಳಿಗೆ www.indiapost.gov.in ವೆಬ್‌ಸೈಟ್‌ಗೆ ಲಾಗ್‌ ಇನ್‌ ಆಗಬಹುದಾಗಿದೆ ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com