ತಲ್ಲೂರು ಶ್ರೀ ಮಹಾಕಾಳಿ ದೇವಸ್ಥಾನ ಯಡಿಯೂರಪ್ಪ ಭೇಟಿ

ಕುಂದಾಪುರ:  ತಲ್ಲೂರಿನ  ಶ್ರೀ ಮಹಾಕಾಳಿ ದೇವಸ್ಥಾನ ಮತ್ತು  ಶ್ರೀ ಕೋಟಿ ಚೆನ್ನಯರ ಗರಡಿಯ ನೂತನ ಶಿಲಾದೇಗುಲ ಸಮರ್ಪಣೆ, ಪುನಃ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಶಾಭಿಷೇಕ, ಚಂಡಿಕ ಹೋಮ, ವಾರ್ಷಿಕ ಕೆಂಡ ಸೇವೆಯ ಧಾರ್ಮಿಕ ಕಾರ್ಯಗಳ ಶುಭಾವಸರದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆಗಿರುವ ಬಿ.ಎಸ್‌. ಯಡಿಯೂರಪ್ಪ ಜ. 26ರಂದು ಭೇಟಿ ನೀಡಿ ಶ್ರೀ ದೇವರ  ದರ್ಶನ ಪಡೆದರು.

ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕ ಮಗಳೂರು ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು  ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಗೀತಾಂಜಲಿ ಸುವರ್ಣ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಸಂತ ಆರ್‌. ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಬಿ.ಶೆಟ್ಟಿ, ರವೀಂದ್ರ ವಿ. ಶೆಟ್ಟಿ, ಗಣಪಯ್ಯ ಶೆಟ್ಟಿ, ಸರ್ವೋತ್ತಮ ಶೆಟ್ಟಿ,  ಟಿ. ಕೆ. ಕೋಟ್ಯಾನ್‌, ಸದಾನಂದ ಶೇರುಗಾರ್‌, ಸುದರ್ಶನ ಶೆಟ್ಟಿ ಮಾರ್ಕೋಡು, ಅರ್ಚಕ ಪ್ರಭಾಕರ ಭಟ್‌, ದೆ„ವದ ಪಾತ್ರಿ ರಾಜು ಪೂಜಾರಿ, ರತ್ನಾಕರ ಪೂಜಾರಿ, ಚಂದ್ರ ಮೊಗವೀರ, ಶೇಖರ ಪೂಜಾರಿ, ರವಿ ಮೊಗವೀರ, ನಾರಾಯಣ ಶೆಟ್ಟಿ, ಟಿ.ಕೆ. ಶೇಖರ ಶೆಟ್ಟಿ,, ಬಾಬು ಮೊಗವೀರ ಕೆಳಹಿತ್ಲು, ಸುನಿಲ್‌ ಖಾರ್ವಿ, ನಾರಾಯಣ ಶೆಟ್ಟಿ ಮೇಲ್ಮನೆ, ಟಿ.ಎನ್‌. ಹರೀಶ್‌ ಶೆಟ್ಟಿ, ಅಜಿತ್‌ಕುಮಾರ್‌ ಶೆಟ್ಟಿ, ಸುಂದರ ಶೆಟ್ಟಿ, ಆನಂದ ಶೆಟ್ಟಿ ಬೀಡ್ನಾಡಿ, ಜಯರಾಮ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಉದಯ ಶೆಟ್ಟಿ, ಮಾಕ ಪೂಜಾರಿ, ಮೂಡುರ ಮಾಸ್ಟರ್‌ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com