ತೆಕ್ಕಟ್ಟೆ: ಮಾದಕ ವಸ್ತುಗಳ ನಿಯಂತ್ರಣಕ್ಕೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ ಮಾದಕ ವಸ್ತು ಹಾಗೂ ಅಕ್ರಮ ಮದ್ಯದ ನಿಯಂತ್ರಣಕ್ಕೆ ಜನ ಜಾಗೃತರಾಗಿಬೇಕಾದ ಅನಿವಾರ್ಯತೆ ಇದೆ ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತೀ ಅಗತ್ಯ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಎಸ್. ಮುರಳಿ ಹೇಳಿದರು.
ಅವರು ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರ ಕಲ್ಯಾಣ ಮಂಟಪದಲ್ಲಿ ಕುಂದಾಪುರ ಅಬಕಾರಿ ಇಲಾಖೆಯ ವತಿಯಿಂದ ನಡೆದ ಗ್ರಾಮಸಭೆ ( ಜನ ಸಂಪರ್ಕ ಸಭೆ)ಯನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಮಾದಕ ವಸ್ತುಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತ ಮನೋಭಾವ ತಳೆಯಬೇಕಾದ ಅಗತ್ಯತೆ ಇದೆ ಅದರಂತೆ ಯುವ ಸಮುದಾಯದ ಮೇಲಿನ ಸಾಮಾಜಿಕ ಜವಾಬ್ದಾರಿ ಹಾಗೂ ನಡವಳಿಕೆಯ ಮೇಲೆ ಪ್ರಪಂಚ ಮುನ್ನಡೆಯ ಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕು ಅಬಕಾರಿ ವಲಯ ನಿರೀಕ್ಷಕರು ಶುಭದಾ ಸಿ. ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ 2007 ಇಸವಿಯಲ್ಲಿ ಸಂಪೂರ್ಣ ಸಾರಾಯಿ ನಿಷೇಧಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಬಹುದು ಎನ್ನುವ ನಿಟ್ಟಿನಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಇಲಾಖೆಯೂ ಸರಕಾರದ ಕಾನೂನಿನ ಅನ್ವಯ ಮಹತ್ವದ ಮಾರ್ಗೊಪಾಯವನ್ನು ಹುಡುಕ ಹೊರಟಿದೆ ಎಂದರು.
ಹಳ್ಳಿ ಹಳ್ಳಿಗಳಿಗೆ ತೆರಳಿ ಅಕ್ರಮ ಮದ್ಯದ ಕುರಿತು ಮಾಹಿತಿ ಕಲೆಹಾಕುವುದು ಕಷ್ಟ ಸಾಧ್ಯ ಎನ್ನುವ ನಿಟ್ಟಿನಿಂದ ಪ್ರತಿ ಗ್ರಾಮದಲ್ಲಿ ಜನ ಸಂಪರ್ಕ ಸಭೆ ಕರೆದು ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿ ಅಕ್ರಮವನ್ನು ಹತ್ತಿಕ್ಕಲು ಇಲಾಖೆ ಚುರುಕಾಗಿದೆ ಎಂದರು .
ಅಬಕಾರಿ ಉಪ ನಿರೀಕ್ಷಕರು ಎಸ್.ಶಂಕರ್, ಅಬಕಾರಿ ಉಪ ನಿರೀಕ್ಷಕರು ವಿ.ಅರವಿಂದ್, ತೆಕ್ಕಟ್ಟೆ ಕೆನರಾ ಬ್ಯಾಂಕ್ನ ಶಾಮ್ ಸುಂದರ್ ತೆಕ್ಕಟ್ಟೆ, ತೆಕ್ಕಟ್ಟೆ
ಫ್ರೆಂಡ್ಸ್ನ ಸಂಘಟಕ ಪ್ರಕಾಶ್ ಶೆಟ್ಟಿ, ಸಂಘಟಕ ಕಿರಣ್, ನ್ಯಾಯವಾದಿ ಸಜನ್ ತೆಕ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ಗ್ರಾಮಸ್ಥರ ನಡುವೆ ಸಂವಾದಗಳು ನಡೆದವು.
ಅಬಕಾರಿ ಉಪ ನಿರೀಕ್ಷಕರು ಎಸ್.ಶಂಕರ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ನಿರೂಪಿಸಿ ವಂದಿಸಿದರು.
0 comments:
Post a Comment