ಸೌಪರ್ಣಿಕಾ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ಆರಂಭ

ತ್ರಾಸಿ: ಇಲ್ಲಿನ ಅಂಬಾ ಟವರ್‍ಸ್‌ನ ಮಹಡಿಯಲ್ಲಿ ಹೊಸದಾಗಿ ಆರಂಭವಾಗಿರುವ ಸೌಪರ್ಣಿಕಾ ವಿವಿಧೋದ್ದೇಶ ಸೇವಾ ಸಹಕಾರಿ ಸಂಘವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಶುಕ್ರವಾರ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ತ್ರಾಸಿ ಚರ್ಚ್‌ನ ಧರ್ಮಗುರು ಅನಿಲ್ ಕರ್ನೇಲಿಯೊ ಮತ್ತು ಕಂಪ್ಯೂಟರನ್ನು ಅನಿವಾಸಿ ಭಾರತೀಯ ಬಿ. ಜಿ. ಮೋಹನದಾಸ್ ಉದ್ಘಾಟಿಸಿದರು.

ಆ ಬಳಿಕ ಶಾಸಕ ಕೆ. ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಜೇಂದ್ರಕುಮಾರ್ ‘ಮಹಿಳೆಯರು ತಮ್ಮ ಆರ್ಥಿಕ ಪ್ರಗತಿ ಸಾಧನೆಗೆ ಸಹಕಾರಿ ನೆಲೆಯಲ್ಲಿ ಸಂಘಟಿತರಾಗುವುದು ಸ್ವಾಗತಾರ್ಹ. ಅವರು ಮಿತವ್ಯಯದ ಮೂಲಕ ಉಳಿತಾಯ ಮಾಡುವುದರ ಜತೆಗೆ ಪಡೆಯುವ ಸಾಲವನ್ನು ಅನುತ್ಪಾದಕ ಉದ್ದೇಶಕ್ಕೆ ಬಳಸದೆ, ಉತ್ಪಾದಕ ಚಟುವಟಿಕೆಗಳಿಗೆ ಬಳಸಬೇಕು. ಅದರಿಂದ ಅವರ ಆರ್ಥಿಕ ಸ್ವಾವಲಂಬನೆ ಸಾಧಿಸಲ್ಪಡುತ್ತದೆ’ ಎಂದು ಹೇಳಿದರು. ಸಂಘಕ್ಕೆ ರೂ 1 ಲಕ್ಷ ನೆರವು ಪ್ರಕಟಿಸಿದರು.

ಫಾ. ಅನಿಲ್ ಕರ್ನೇಲಿಯೊ, ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಬಿ. ರಘುರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಬಿ. ಜಿ. ಮೋಹನದಾಸ್, ಉದ್ಯಮಿ ಡಾ. ಜಾರ್ಜ್ ಡಿ. ಆಲ್ಮೇಡ, ಸ್ಥಳೀಯ ಪ್ರಮುಖ ಸುಧಾಕರ ಆಚಾರ್ಯ ಶುಭ ಕೋರಿದರು.

ತಾಲೂಕು ಪಂಚಾಯತ್ ಸದಸ್ಯೆ ಶಾರದಾ ಶೇಖರ್ ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ನಾಯಕ್, ಸಂಘದ ಉಪಾಧ್ಯಕ್ಷೆ ರೇಷ್ಮಾ ಚಂದ್ರ ಪೂಜಾರಿ, ಅಂಬಾ ಟವರ್‍ಸ್‌ನ ಮಾಲೀಕ ಸುಧಾಕರ ಶೆಟ್ಟಿ ವೇದಿಕೆಯಲ್ಲಿದ್ದರು.

ಸಂಘದ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಕರ್ತವ್ಯನಿಷ್ಠೆಯ ಪ್ರಮಾಣ ವಚನ ಬೋಧಿಸಲಾಯಿತು. ನಿರ್ದೇಶಕಿ ಸುಜಾತಾ ಮಂಜುನಾಥ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com