ಆರೋಪಿಗಳ ಪತ್ತೆಗೆ ಕಠಿನ ಕಾನೂನು ಕ್ರಮ: ಬೈಂದೂರು ಶಾಸಕ

ತ್ರಾಸಿ:  ಗಂಗೊಳ್ಳಿಯಲ್ಲಿ  ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿನ ಶಿಕ್ಷೆ ವಿಧಿಸಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದು ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು ಹೇಳಿದರು.

 ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು  ಘಟನೆಯನ್ನು  ಖಂಡಿಸಿದ್ದಾಗಿ ತಿಳಿಸಿದ ಅವರು ಅಂಗಡಿ ಮಾಲಕರನ್ನು ಈಗಾಗಲೇ ಭೇಟಿ ಮಾಡಿ ವಿವರ ಪಡೆದಿದ್ದೇನೆ.
     ಸರಕಾರ ಹಾಗೂ ಇಲಾಖಾ ಮಟ್ಟದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ನಿರ್ಧರಿಸಿದ್ದೇನೆ. ಪ್ರಕರಣದ ಕುರಿತು ಸಿಸಿ ಕ್ಯಾಮರಾದಲ್ಲಿ ಕಂಡುಬಂದ ಮಾಹಿತಿಯಿಂದ ಇದು ಕಿಡಿಗೇಡಿಗಳ ಪೂರ್ವಭಾವೀ ಸಂಚು ಎಂಬುದು ಪತ್ತೆಯಾಗಿದ್ದು, ಹಸ್ತಕ್ಷೇಪವಿಲ್ಲದ ತನಿಖೆ ಯಿಂದ ಪೊಲೀಸರು ಪ್ರಕರಣದ ಸತ್ಯಾಂಶವನ್ನು ಬೆಳಕಿಗೆ ತರಬೇಕಾಗಿದೆ ಎಂದರು.
      ಸಾಮಾಜಿಕ ಶಾಂತಿಯನ್ನು ಕದಡುವಂತಹ ಘಟನೆಗಳು ಇನ್ನು ಮುಂದೆ ಯಾವತ್ತೂ ಮರುಕಳಿಸದಂತೆ ಎಚ್ಚರ ವಹಿಸುವುದರೊಂದಿಗೆ ಶಾಂತಿ ಯನ್ನು ಕಾಪಾಡಲು ಗಂಗೊಳ್ಳಿ ಜನತೆ ಸಹಕರಿಸುವಂತೆ ಶಾಸಕರು ಮನವಿ ಮಾಡಿಕೊಂಡರು. ಪ್ರಕರಣದ ವಾಸ್ತವ ವನ್ನು ಬಯಲಿಗೆಳೆಯುವುದರೊಂದಿಗೆ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಗಂಗೊಳ್ಳಿಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸಮುದಾಯದ ಮುಖಂಡರ ನೇತƒತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಇದರ ಜವಾಬ್ದಾರಿಯನ್ನು ನಮ್ಮಭೂಮಿಯ ದಾಮೋದರ ಆಚಾರ್ಯ ಅವರಿಗೆ ವಹಿಸಲಾಗಿದೆ ಎಂದ ಶಾಸಕ ಗೋಪಾಲ  ಪೂಜಾರಿ ಅವರು ಸಚಿವ ಸೊರಕೆ ಅವರು ಗಂಗೊಳ್ಳಿಗೆ ಭೇಟಿ ನೀಡಲಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ಎಂ. ಎ. ಗಫೂರ್‌, ಜಿ.ಪಂ. ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ, ಮೀನುಗಾರ ಮುಖಂಡ ನಾಗ ಖಾರ್ವಿ, ಗಂಗೊಳ್ಳಿ ವಲಯ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದುರ್ಗಾರಾಜ್‌ ಪೂಜಾರಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com