ಜ.3: ’ಉಜ್ವಾಡು’ ಕೊಂಕಣಿ ಚಿತ್ರದ ಡಿ.ವಿ.ಡಿ ಬಿಡುಗಡೆ

ಉಪ್ಪುಂದ : ಕೊಂಕಣಿ ಭಾಷೆಯ ಸದಭಿರುಚಿಯ ಚಲನಚಿತ್ರವನ್ನು ಪ್ರೋತ್ಸಾಹಿಸಿ  ತನ್ಮೂಲಕ ಭಾಷೆಯ ಸಮೃದ್ಧಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯ ಪ್ರಶಸ್ತಿ ಪಡೆದ ಕಾಸರಗೋಡು ಚಿನ್ನಾ ನಿರ್ದೇಶನದ ’ಉಜ್ವಾಡು’ ಕೊಂಕಣಿ ಚಲನಚಿತ್ರದ ಡಿವಿಡಿ ಬಿಡುಗಡೆ ಕಾರ್ಯಕ್ರಮ ಜನವರಿ 3ರ ಸಂಜೆ 5ಕ್ಕೆ ಉಪ್ಪುಂದ ಶ್ರೀಲಕ್ಮೀವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
      ದೇವಾಲಯದ ಆಡಳಿತ ಮಂಡಳಿಯ ಉಸ್ತುವಾರಿಯಲ್ಲಿ ಜರಗುವ ಈ ಸಮಾರಂಭದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷರೂ ಹಿರಿಯ ಉದ್ಯಮಿಯೂ ಆದ ಶ್ರೀ ಬಿ ಗಣಪತಿ ಪ್ರಭುರವರು ಡಿವಿಡಿ ಬಿಡುಗಡೆ ಮಾಡಲಿದ್ದು ಪ್ರಧಾನ ಅತಿಥಿಯಾಗಿ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ, ಉದ್ಯಮಿ ವಿಷ್ಣು ಪಡಿಯಾರ ವಹಿಸಲಿದ್ದು ವೇದಮೂರ್ತಿ ಚಂದ್ರಶೇಖರ ಭಟ್ ದೀಪ ಬೆಳಗಿಸಲಿದ್ದಾರೆ. ಪ್ರಥಮ ಡಿವಿಡಿಯನ್ನು ಉದ್ಯಮಿ ಕೆ ವೆಂಟೇಶ್ ಕಿಣಿ ಬೈಂದೂರು ಇವರು ಸ್ವೀಕರಿಸಲಿದ್ದಾರೆ. ಶಿರೂರು ಪೇಟೆ ವೆಂಕಟ್ರಮಣ ದೇವಾಲಯದ ಅಧ್ಯಕ್ಷ ವೆಂಕಟೇಶ್ ಎನ್ ಪ್ರಭು, ನಾಯ್ಕನಕಟ್ಟೆ ಶ್ರೀ ವೆಂಕಟ್ರಮಣ ಸೇವಾ ಸಮಿತಿ ಅಧ್ಯಕ್ಷ ದಾಮೋದರ ಪ್ರಭು, ಉದ್ಯಮಿ ರಾಜೀವ ಭಟ್ ಉಪ್ಪುಂದ ಇವರು ಪಾಲ್ಗೊಳ್ಳಲಿದ್ದು ಮಂಡಳಿಯ ಕಾರ್ಯದರ್ಶಿ ಸತೀಶ್ ಪಡಿಯಾರ ಉಪ್ಪುಂದ ಶುಭ ಶಂಸನೆ ಹಾಗೂ ಓಂಗಣೇಶ್ ಕಾಮತ್ ಇವರು ನಿರೂಪಿಸದ್ದು ಕೊಂಕಣಿ ಭಾಷಾಭಿಮಾನಿಗಳೆಲ್ಲರೂ ಪಾಲ್ಗೋಳ್ಳ ಬೇಕೆಂದು ಎಂದು ಪ್ರಾಯೋಜಕರು ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com