ಸಾಂಸ್ಕೃತಿಕ ಆಸಕ್ತಿ ಬದುಕನ್ನು ಸುಂದರವಾಗಿಸುತ್ತದೆ: ಕಾಸರಗೋಡು ಚಿನ್ನಾ

ಉಪ್ಪುಂದ: ಉನ್ನತ ವ್ಯಾಸಂಗ, ಉನ್ನತ ವ್ಯವಹಾರದೊಂದಿಗೆ ಆರ್ಥಿಕ ಅಭಿವೃದ್ಧಿಯೊಂದೆ ನಮ್ಮ ಗುರಿಯಾಗಬಾರದು. ಸಾಂಸ್ಕೃತಿಕ ಆಸಕ್ತಿಯೂ ನಮ್ಮೊಳಗಿದ್ದಾಗ ಬದುಕು ಸೌಂದರ್ಯವನ್ನೂ ಅರ್ಥವನ್ನೂ ಪಡೆಯುತ್ತದೆ, ವೃದ್ಧ ಮಾತಾ ಪಿತರನ್ನು ಗೌರವದಿಂದ ಪ್ರೀತಿಯಿಂದ ಸಲಹುದೆ ನಮ್ಮ ಮುಖ್ಯ ಸಂಸ್ಕೃತಿ. ಇಂತಹ ವಿಷಯಗಳನ್ನೆ ಉಜ್ವಾಡು ಕೊಂಕಣಿ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.
ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಆಶ್ರಯದಲ್ಲಿ ಜರುಗಿದ ಉಜ್ವಾಡು ಕೊಂಕಣಿ ಚಲನಚಿತ್ರದ ಡಿ ವಿ ಡಿ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡು ಮಾತನಾಡಿದರು.
     ವೇದಮೂರ್ತಿ ಚಂದ್ರಶೇಖರ ಭಟ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಬಿ ಗಣಪತಿ ಪ್ರಭು ಡಿ ವಿ ಡಿ ಬಿಡುಗಡೆಗೊಳಿಸಿ ಉದ್ಯಮಿ ಕೆ ವೆಂಕಟೇಶ್ ಕಿಣಿ ಬೈಂದೂರು ಇವರು ಪ್ರಥಮ ಡಿವಿಡಿ ಸ್ವೀಕರಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ವಿಷ್ಣು ಪಡಿಯಾರ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕಾರ್ಯದರ್ಶಿ ಸತೀಶ್ ಪಡಿಯಾರ ಶುಭ ಸಂಸನೆ ಗೈದರು. ಉದ್ಯಮಿ ಸದಾನಂದ ಪ್ರಭು ರಾಯಚೂರು, ಶಿರೂರು ಪೇಟೆ ವೆಂಕಟರಮಣ ದೇವಳದ ಅಧ್ಯಕ್ಷ ವೆಂಕಟೇಶ್ ಎನ್ ಪ್ರಭು, ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾ ಸಮಿತಿಯ ಅಧ್ಯಕ್ಷ ದಾಮೋದರ ಪ್ರಭು ಅತಿಥಿಯಾಗಿದ್ದರು.  
      ಇದೇ ಸಂದರ್ಭದಲ್ಲಿ ಕೊಂಕಣಿ ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ಕಾಸರಗೋಡು ಚಿನ್ನಾರವರನ್ನು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ಕೊಂಕಣಿ ಪ್ರೊತ್ಸಾಹಕ ಬೈಂದೂರಿನ ಎಮ್ ಎಮ್ ಮೀರನ್ ಇವರನ್ನು ಚಿತ್ರತಂಡದ ಪರವಾಗಿ ಗೌರವಿಸಲಾಯಿತು.  ಶ್ರೀನಾಥ ಪಡಿಯಾರ ಸ್ವಾಗತಿಸಿದರು, ಬಿ ವಿಠ್ಠಲ್‌ದಾಸ ಪ್ರಭು ವಂದಿಸಿದರು. ಪಾಂಡುರಂಗ ಪಡಿಯಾರ ಪರಿಚಯಿಸಿ,  ಓಂಗಣೇಶ್ ಕಾಮತ್ ನಿರೂಪಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com