ಕಡಲೋತ್ಸವದಲ್ಲಿ ಸಮುದ್ರ ಚಿತ್ತಾರಕ್ಕೆ ಚಾಲನೆ

ಉಪ್ಪುಂದ: ಶ್ರೀ ಮಹಾಲಿಂಗೇಶ್ವರ ಕ್ರೀಡಾ ಕಲಾ ಸಾಂಸ್ಕ್ರತಿಕ ಸಂಘದ ವಾರ್ಷಿಕೋತ್ಸವ ಹಾಗೂ ಸಮುದ್ರ ಚಿತ್ತಾರ-2015 ಕಾರ್ಯಕ್ರಮ ಮಡಿಕಲ್ ಕಡಲ ತೀರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯೆಂದೂರು ಶಾಸಕ ಕೆ.ಗೋಪಾಲ ಪೂಜಾರಿ ಕರಾವಳಿ ಪ್ರವಾಸೋಧ್ಯಮ ಅಭಿವೃದ್ದಿಗೆ ಸರಕಾರ ಹಾಗೂ ಪ್ರವಾಸೋಧ್ಯಮ ಇಲಾಖೆ ವಿಶೇಷ ಒತ್ತು ನೀಡುತ್ತಿದೆ. ನೈಸರ್ಗಿಕ ಸೌಂದರ್ಯದ ಮಡಿಕಲ್ ಹೊರಬಂದರು ನಿರ್ಮಾಣಕ್ಕೆ ಸರ್ವೆ ಕಾರ್ಯ ಮುಗಿದಿದೆ. ಖಾರ್ವಿ ಸಮಾಜದ ಸಭಾ ಭವನ ನಿರ್ಮಾಣಕ್ಕೆ 1ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಕಡಲ್ಕೊರೆತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಸೇರಿದಂತೆ ಕರಾವಳಿ ಭಾಗದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಅಳ್ವೆಕೋಡಿಯಿಂದ ಕೊಡೇರಿವರೆಗಿನ ಪ್ರದೇಶವನ್ನು ಬೀಚ್ ಪಾಯಿಂಟ್ ಎಂದು ಘೋಷಣೆ ಮಾಡಲಾಗಿದೆ. ಹಾಗೂ ಈ ಪ್ರದೇಶದ ಅಭಿವೃದ್ದಿಗೆ ಪ್ರವಾಸೋಧ್ಯಮ ಇಲಾಖೆಯಿಂದ ಅನುದಾನ ದೊರೆಯಲಿದೆ ಎಂದರು.
ಬ್ಯೆಂದೂರು: 

 ಕಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮದನ್ ಕುಮಾರ್ ಮಾತನಾಡಿ ಪ್ರವಾಸೋಧ್ಯಮ ಅಭಿವೃದ್ದಿ ಹಾಗೂ ಕಡಲ ಕಲೆಯ ಅನಾವರಣದ ಹಿನ್ನೆಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

 ಬಂದರು ಇಲಾಖೆ ನಿವೃತ್ತ ಸಹಾಯಕ ಅಭಿಯಂತರ ಎನ್.ಎಮ್.ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ಓಂ ಗಣೇಶ ಉಪ್ಪುಂದ ಆಶಯ ಭಾಷಣ ಮಾಡಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಪ್ರತಿಭಾ ಪುರಸ್ಕಾರ ವಿತರಿಸಿದರು.

ಈ ಸಂಧರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಅಣ್ಣಪ್ಪ ಖಾರ್ವಿ, ಶಿರೂರು ಗ್ರಾ.ಪಂ ಅಧ್ಯಕ್ಷ ರಾಮ ಮೇಸ್ತ, ಮಹಾಈಶ್ವರ ದೇವಸ್ಥಾನ ಅರಮಕೋಡಿ ಮಡಿಕಲ್ ಇದರ ಅಧ್ಯಕ್ಷ ಬಿ.ಶ್ರೀಧರ ಖಾರ್ವಿ, ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ಚಂದ್ರ ಖಾರ್ವಿ,ಬ್ಯೆಂದೂರು ವಲಯ ಮೀನುಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಶ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಡಿ.ರಾಮಚಂದ್ರ ಖಾರ್ವಿ,ಮಾಜಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಖಾರ್ವಿ ,ಅಧ್ಯಕ್ಷ ರಾಮ ಖಾರ್ವಿ,ಕಾರ್ಯದರ್ಶಿ ನಾಗೇಶ ಖಾರ್ವಿ ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com