ಅಯ್ಯಪ್ಪ ಸ್ವಾಮಿ ಭಕ್ತ ವಂದದವರ ಮಹಾಪೂಜೆ, ಹಾಗೂ ಧಾರ್ಮಿಕ ಸಭಾ

ಉಪ್ಪುಂದ: ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲ ನ್ಯೂನ್ಯತೆಗಳನ್ನು ಹೋಗಲಾಡಿಸಿ ಕೊಳ್ಳಲು ಸಾಧ್ಯ ಎಂದು ಹಿರಿಯ ಧಾರ್ಮಿಕ ಚಿಂತಕ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಹೇಳಿದರು. 

 ಉಪ್ಪುಂದ ನಂದನವನದಲ್ಲಿ ಮಹಾಬಲೇಶ್ವರ ಅಯ್ಯಪ್ಪ ಸ್ವಾಮಿ ಭಕ್ತ ವಂದದವರ 29ನೇ ವರ್ಷದ ಮಹಾಪೂಜೆ, ಹಾಗೂ ಧಾರ್ಮಿಕ ಸಭಾ ಕಾರ‌್ಯಕ್ರಮದಲ್ಲಿ ಅವರು ಧಾರ್ಮಿಕ ಪ್ರವಚನ ನೀಡಿದರು. 

ಅಯ್ಯಪ್ಪ ವ್ರತಧಾರಿಗಳಲ್ಲಿ ನಯ, ವಿನಯ, ಭಕ್ತಿ, ಶ್ರದ್ಧೆ ಕಾಣಬಹುದಾಗಿದ್ದು, ಇದು ಕೇವಲ ವ್ರತದ ಅವಧಿಗೆ ಸೀಮಿತವಾಗಿರದೇ ಜೀವನ ಪರ್ಯಂತ ಮುಂದುವರೆಸಿಕೊಂಡು ಹೋಗಬೇಕು. ಆಗ ಮಾತ್ರ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದರು. 

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಾಲಯದ ಧರ್ಮದರ್ಶಿ ವೇ.ಮೂ. ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂದನವನ ಶ್ರೀ ಮಹಾಬಲೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಜೀವ ಭಟ್ ಮಾತನಾಡಿದರು. 

29ನೇ ವರ್ಷದ ಅಯ್ಯಪ್ಪ ವ್ರತಾಧಾರಿ ಬಾಬು ಗುರುಸ್ವಾಮಿ, 18ನೇ ವರ್ಷದ ವ್ರತಾಧಾರಿಗಳಾದ ಮೋಟಿ ಮೋಹನ ಸ್ವಾಮಿ, ಜಯರಾಮ ಸ್ವಾಮಿ ಕಾಸನಾಡಿ ಹಾಗೂ ಸಿಇಟಿಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿ ಕ್ಷಿಪ್ರ ದೇವಾಡಿಗ, ಗಿನ್ನಿಸ್ ದಾಖಲೆಯ ಈಜುಪಟು ಗೋಪಾಲ ಖಾರ್ವಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶಂಕರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಬಾಬು ಸ್ವಾಮಿ ಸ್ವಾಗತಿಸಿದರು, ದಿವಾಕರ ಶೆಟ್ಟಿ ನಿರೂಪಿಸಿ, ಸತೀಶ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com