ಮಾರ್ಚ್ ಅಂತ್ಯದಲ್ಲಿ ವಾರಾಹಿ ಎಡದಂಡೆ ನೀರು ಹರಿಸಲು ಅಧಿಕಾರಿಗಳ ಭರವಸೆ

ಸಿದ್ಧಾಪುರ: ವಾರಾಹಿ ನೀರಾವರಿ ಯೋಜನೆಯ ಬಹುತೇಕ ಕಾಮಗಾರಿಗಳು ಅಂತಿಮ ಘಟ್ಟದಲ್ಲಿದೆ. ಎಡದಂಡೆಯ 19ಕಿಲೋಮೀಟರ್ ತನಕ ಮಾರ್ಚ್ ಅಂತ್ಯದೊಳಗೆ ನೀರು ಹಾಯಿಸಬಹುದು ಎಂದು ವಾರಾಹಿ ನೀರಾವರಿ ನಿಗಮದ ಆಡಳಿತ ನಿರ್ದೇಶಕ ರುದ್ರಯ್ಯ ತಿಳಿಸಿದ್ದಾರೆ. 

ಧರಣಿ ನಿರತ ರೈತ ಮುಖಂಡರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಅಂತಿಮಘಟ್ಟ ತಲುಪುವ ತನಕ ಬೆಂಗಳೂರು ಬಿಟ್ಟು ಯೋಜನೆ ಪ್ರದೇಶದಲ್ಲಿಯೇ ಇರುವ ತೀರ್ಮಾನ ತೆಗೆದುಕೊಂಡಿರುವುದಾಗಿ ಭರವಸೆ ನೀಡಿದರು. 

ಆದರೆ, ಸರಕಾರದಿಂದ ಅಧಿಕೃತವಾಗಿ ಇಂತಿಷ್ಟೇ ಸಮಯದಲ್ಲಿ ಕಾಮಗಾರಿ ಮುಗಿಸಿ ಕಾಲುವೆಗೆ ನೀರು ಬಿಡಲಾಗುತ್ತದೆ ಎಂಬ ಸ್ಪಷ್ಟನೆ ಬಾರದ ಹೊರತು ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಕಾಲುವೆಗೆ ನೀರು ಹರಿಯುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ಉಡುಪಿ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ತಿಳಿಸಿದರು. 

ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ, ಸತ್ಯನಾರಾಯಣ ಉಡುಪ, ವಾಸುದೇವ ಶಾನುಭಾಗ್ ಮತ್ತಿತರರು, ಕಾಪು ಬ್ಲಾಕ್ ಕಾಂಗ್ರೆಸ್‌ನ ಶಾಂತಾರಾಮ ಸೂಡ, ಪ್ರಕಾಶ್ ಶೆಟ್ಟಿ, ಶಿರ್ವ ಕಾಂಗ್ರೆಸ್‌ನ ರೋನಿ, ಪೆರ್ಡೂರು ಗ್ರಾ.ಪಂ.ನ ಶ್ರೀಪಾದ ರೈ, ದೇವಪ್ಪ ಪೂಜಾರಿ, ಉಡುಪಿ ಜಿಲ್ಲಾ ರೈತ ಸಂಘದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com