ಸರಕಾರದ ದ್ವಂದ್ವ ನಿಲುವು ಸರಿಯಲ್ಲ: ರಾಜೇಂದ್ರ ಕುಮಾರ್‌

ಸಿದ್ದಾಪುರ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಉಳಿವಿಗಾಗಿ ಆರಂಭಗೊಂಡ ವಾರಾಹಿ ಯೋಜನೆಯು ಇನ್ನೂ ಕೂಡಾ ರೈತರಿಗೆ ಹನಿ ನೀರನ್ನು ಕೊಡಲು ವಿಫಲವಾಗಿದೆ. ಸಕ್ಕರೆ ಕಾರ್ಖಾನೆಯ ರೈತರಿಗೆ ಹಣ ನೀಡಲು ಸತಾಯಿಸಿದ ಸರಕಾರ ವಾರಾಹಿ ಗುತ್ತಿಗೆ ದಾರರಿಗೆ ಹಣ ನೀಡಲು ಸತಾಯಿಸದೇ ಇರುವುದು ವಿಪರ್ಯಾಸ. ಈ ರೀತಿಯ ದ್ವಂದ್ವ ನಿಲುವು ಸರಿಯಲ್ಲ. ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಎನ್‌. ರಾಜೇಂದ್ರ ಕುಮಾರ್‌ ಅವರು ಹೇಳಿದರು.

ಅವರು ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಾರಾಹಿ ನೀರಿಗಾಗಿ ವಾರಾಹಿ ಕಚೇರಿ ಎದುರು ನಡೆಯುತ್ತಿರುವ ಅಹೋ ರಾತ್ರಿ ಪ್ರತಿಭಟನೆ ಹನ್ನೇರಡನೇ ದಿನಕ್ಕೆ ಕಾಲಿರಿಸಿದ ಸಂದರ್ಭದಲ್ಲಿ  ಪ್ರತಿಭಟನೆಯ ಸಭೆಗೆ ಆಗಮಿಸಿ, ಪ್ರತಿಭಟನಾ ರೈತರ ಉದ್ದೇಶಿಸಿ ಮಾತನಾಡಿದರು.

ವಾರಾಹಿ ಯೋಜನೆಯಲ್ಲಿ ನೂರಾರು ಕೋಟಿ ರೂ. ಹಣ ವ್ಯಯಿಸಿದರೂ ರೈತರಿಗೆ ಒಂದು ಹನಿ ನೀರು ಕೂಡ ಕೊಡಲು ಸಾಧ್ಯವಾಗಲಿಲ್ಲ. ಶುದ್ಧಹಸ್ತದ ಹಿರಿಯ ರಾಜಕಾರಣಿ ಪ್ರತಾಪಚಂದ್ರ ಶೆಟ್ಟಿ ಅವರು ರೈತ ಸಂಘಟನೆಯ ಮೂಲಕ ವಾರಾಹಿ ಯೋಜನೆಯ ವಿರುದ್ಧ ಹೋರಾಟ ಮಾಡುತ್ತಿರುವುದಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು. ಇಂದಿನ ಪ್ರತಿಭಟನೆಯಲ್ಲಿ ಆವರ್ಸೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ನೇತೃತ್ವವಹಿಸಿದರು.

ಉಡುಪಿ ಶಾಸಕ ಪ್ರಮೋದ್‌ ಮಧ್ವರಾಜ್‌, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ ಬೈಂದೂರು, ರಘುರಾಮ ಶೆಟ್ಟಿ,ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಕುಲಾಲ ಹೈಕಾಡಿ ರೈತ ಸಂಘದ ವಿವಿಧ ಕಡೆಯ ಮುಖಂಡರು ಮೊದಲಾದವರು ಉಪಸ್ಥಿತರಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com