ವಾರಾಹಿ: ಮುಂದುವರಿದ ಅಹೋರಾತ್ರಿ ಧರಣಿ, ವಿದ್ಯಾರ್ಥಿಗಳ ಸಾಥ್

ಕುಂದಾಪುರ: ವಾರಾಹಿ ನೀರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ತಲುಪಿದ್ದು ವಿವಿಧ ಸಂಘಟನೆಗಳು ಧರಣಿಯಲ್ಲಿ ಭಾಗಿಯಾಗುತ್ತದೆ.
 ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿತಿನ್ ಶೆಟ್ಟಿ ಮಾತನಾಡಿ, ಯೋಜನೆ ಆರಂಭಗೊಂಡು 35 ವರ್ಷ ಕಳೆದಿದೆ. ನಾವು ಹುಟ್ಟಿ ಪದವಿ ಪೂರೈಸುವ ಹಂತ ತಲುಪಿದ್ದರೂ ಯೋಜನೆ ಪೂರ್ಣವಾಗಿಲ್ಲ ಅನ್ನುವುದು ನಾಚಿಕೆಗೇಡಿತನದ ಸಂಗತಿ. ಇದೆ ಪರಿಸ್ಥಿತಿ ಮುಂದುವರಿದ್ದಲ್ಲಿ ಯೋಜನೆ ಇನ್ನೂ 3 ದಶಕ ಹೋದರೂ ಪೂರ್ಣಗೊಳ್ಳಲ್ಲ. ರೈತ ಸಂಘ ನಡೆಸುತ್ತಿರುವ ಹೋರಾಟ ಸಮಯೋಚಿತ. ಹೋರಾಟಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಯೋಜನಾ ಪ್ರದೇಶದಲ್ಲಿ ವಿದ್ಯಾರ್ಥಿ ಚಳವಳಿ ರೂಪಿಸುವ ಮೂಲಕ ರೈತರ ಹೋರಾಟಕ್ಕೆ ಬಲ ನೀಡಲಾಗುವುದು ಎಂದರು.
   ಉಡುಪಿ ಜಿಲ್ಲಾ ರೈತ ಸಂಘ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ, ರೈತ ಸಂಘ ಪ್ರತಿನಿಧಿಗಳು, ಸಿದ್ಧಾಪುರ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com