ಯುವ ಸಪ್ತಾಹ ಉದ್ಘಾಟನೆ

ಕುಂದಾಪುರ: ದೇಶದ ಸಂಸ್ಕಾರ, ಸಂಸ್ಕೃತಿಯನ್ನು  ಉಳಿಸಿ ಬೆಳೆಸಲು ಯುವ ಪೀಳಿಗೆ ಎಚ್ಚೆತ್ತು ಶ್ರಮಿಸಬೇಕು.  ವಿವೇಕಾನಂದರ ತತ್ವ ಆದರ್ಶಗಳನ್ನು  ಜೀವನದಲ್ಲಿ ಅಳವಡಿಸಿಕೊಂಡು  ಸುಂದರ ಭವಿಷ್ಯವನ್ನು  ನಿರ್ಮಾಣ ಮಾಡುವಲ್ಲಿ  ಕಂಕಣಬದ್ಧರಾಗಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್‌ ಅಧ್ಯಕ್ಷ  ಭಾಸ್ಕರ ಬಿಲ್ಲವ ಹೇಳಿದರು.

ಅವರು ಕುಂದಾಪುರ ರೋಟರಿ  ಮಿಡ್‌ಟೌನ್‌ ಸಭಾಂಗಣದಲ್ಲಿ   ಜಿಲ್ಲಾ ಪಂಚಾಯತ್‌ ಉಡುಪಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾವಿಷ್ಣು ಯುವಕ ಮಂಡಲ (ರಿ.) ಹರೇಗೋಡು, ಕಟ್‌ ಬೆಲ್ತೂರು, ರೋಟರಿ ಮಿಡ್‌ಟೌನ್‌ ಕುಂದಾಪುರ ಹಾಗೂ ಮೆಟ್ರಿಕ್‌  ಅನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯ ಕುಂದಾಪುರ ಇವರ  ಆಶ್ರಯದಲ್ಲಿ   ಸ್ವಾಮಿ ವಿವೇಕಾನಂದ  ಜನ್ಮ ದಿನಾಚರಣೆಯ ಅಂಗವಾಗಿ  ನಡೆದ  ಯುವ ಸಪ್ತಾಹ 2015ನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ರೋಟರಿ ಮಿಡ್‌ಟೌನ್‌ ಅಧ್ಯಕ್ಷ  ಅಬ್ದುಲ್‌ ಬಸೀರ್‌ ಕೋಟ  ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬನಲ್ಲೂ ಒಳ್ಳೆಯ ಚಿಂತನೆ, ಗುರಿ ಇದ್ದಲ್ಲಿ ಆತ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲ.  ಯಶಸ್ಸನ್ನು ° ಎಲ್ಲಿಯೂ ಹುಡುಕಿಕೊಂಡು ಹೋಗಬೇಕಾಗಿಲ್ಲ. ಬದಲಾಗಿ ಒಳ್ಳೆಯ ಗುರಿಯನ್ನಿಟ್ಟುಕೊಂಡು ಮಾಡುವ ಕಾರ್ಯ ಯಶಸ್ಸಿಗೆ ಪೂರಕವಾಗಬಲ್ಲದು.  

ಮುಖ್ಯ ಅತಿಥಿಗಳಾಗಿ  ಮೆಟ್ರಿಕ್‌  ಅನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕಿ ಟಿ.ಎಲ್‌. ಅಂತೋನಪ್ಪ, ಮಹೇಶ್‌ ಬೆಟ್ಟಿನ್‌, ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ, ಜಿಲ್ಲಾ ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ದಿನಕರ ಹೆಗ್ಡೆ,  ವಿದ್ಯಾರ್ಥಿ ನಾಯಕರಾದ ಸುದೀಶ್‌, ರೇಷ್ಮಾ  ಉಪಸ್ಥಿತರಿದ್ದರು.

ನ್ಯಾಯವಾದಿ ರಾಘವೇಂದ್ರ ಚರಣ್‌ ನಾವಡ ಅವರು  ತರಬೇತಿಯನ್ನು ನಡೆಸಿಕೊಟ್ಟರು.

ಮಹಮ್ಮದ್‌ ಶೋಹೇಬ್‌ ಸ್ವಾಗತಿ ಸಿದರು. ಮಧು ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ಚೈತ್ರಾ  ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com