ಹುಡುಗಿಯರನ್ನ ಒಲಿಸಿಕೊಳ್ಳಲು 4 ಸೂತ್ರಗಳು

ಹಿಂದಿನ ತಲೆಮಾರಿನಲ್ಲಿ ಸಾಮಾನ್ಯವಾಗಿ ಸಕ್ಕರೆಗೆ ಇರುವೆ ಮುತ್ತಿಕೊಳ್ಳುವ ಹಾಗೆ ಹುಡುಗಿಯರ ಸಂಗ ಬೆಳೆಸಲು ಹುಡುಗರು ಹಾತೊರೆಯುತ್ತಿದ್ದರು. ಈಗಿನ ತಲೆಮಾರಿನಲ್ಲಿ ಹುಡುಗಿಯರೂ ಕೂಡ ಬಾಯ್'ಫ್ರೆಂಡ್'ಗಳ ಹುಡುಕಾಟದಲ್ಲಿರುತ್ತಾರೆ. ಹೆಚ್ಚು ಬಾಯ್'ಫ್ರೆಂಡ್ ಸಿಕ್ಕಷ್ಟೂ ಅವರಿಗೆ ಗ್ರೇಡ್ ಜಾಸ್ತಿ ಎಂಬಂತಾಗಿದೆ. ಹುಡುಗಿಯರನ್ನ ಒಲಿಸಿಕೊಳ್ಳಲು ತುಂಬಾ ಬೇಸಿಕ್ ಆದ ಆದರೆ, ಬಹಳ ಮಹತ್ವದ್ದಾದ ನಾಲ್ಕು ಅಂಶಗಳು ಇಲ್ಲಿವೆ.

1) ಕೇಳಿದರೆ ಮಾತ್ರ ಹೇಳಿ:

ಹುಡುಗಿಯನ್ನ ಮೀಟ್ ಮಾಡಿದ ಕೂಡಲೇ ಹಲ್'ಕಿರಿದು ಬಡಬಡ ಮಾತನಾಡತೊಡಗಬೇಡಿ. ನಿಮ್ಮ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಕಥೆಯನ್ನ ಒಂದೇ ಟೇಕ್'ನಲ್ಲಿ ಹೇಳದಿರಿ. ಅವಳಾಗೇ ಕೇಳುವವರೆಗೂ ನಿಮ್ಮ ಹೆಸರನ್ನಾಗಲೀ ಅಥವಾ ಬೇರೆ ವಿವರವನ್ನಾಗಲೀ ಹೇಳಬೇಡಿ. ಆಕೆಗೆ ಇಷ್ಟವಾಗಬಹುದೆಂಬ ಅಂದಾಜಿನಲ್ಲಿ ಏನೇನೋ ಬ್ಯುಲ್ಡಪ್ ಕೊಡಲು ಹೋಗಬೇಡಿ.

2) ಹಾಸ್ಯರಸವಿರಲಿ:

ಜೋಕ್ ಕಟ್ ಮಾಡುವ, ಇರುವ ಸನ್ನಿವೇಶದಲ್ಲಿ ತಮಾಷೆ ಮಾಡಿ ನಗಿಸುವ ಹುಡುಗರನ್ನ ಕಂಡರೆ ಹುಡುಗಿಯರು ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಾರೆ. ಹೀಗಾಗಿ, ನೀವು ತರಹಾವೇರಿ ಜೋಕ್ ಮಾಡುವ ವಿದ್ಯೆಯನ್ನ ಕರಗತ ಮಾಡಿಕೊಂಡರೆ ಒಳಿತು. ಹಾಗಂತ, ಸಿಲ್ಲಿ ಜೋಕ್'ಗಳನ್ನ ಹೇಳಿ ಹಾಸ್ಯಾಸ್ಪದವಾಗದಿರಿ..!

3) ಸುಲಭಕ್ಕೆ ಸಿಗಬೇಡಿ:

ಬೇಕೆಂದಾಗೆಲ್ಲಾ ಸಿಗುವ ವಸ್ತುವಿಗೆ ಬೆಲೆ ಕಡಿಮೆ. ಹೀಗಾಗಿ, ಹುಡುಗಿಯರಿಗೆ ನೀವು ಬಹಳಷ್ಟು ಸಲ ನಾಟ್ ರೀಚಬಲ್ ಆಗಿದ್ದರೆ ಒಳ್ಳೆಯದು. ಆಕೆಯೇ ಮೊದಲು ಏನನ್ನಾದರೂ ಪ್ರೊಪೋಸ್ ಮಾಡಿದರೆ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳದಿರಿ. ಸ್ವಲ್ಪ ಆಟವಾಡಿಸುವುದನ್ನ ಕಲಿಯಿರಿ. ಆಕೆ ಫೋನ್ ಮಾಡಿದರೆ ರಿಸೀವ್ ಮಾಡಬೇಡಿ. ಮೆಸೇಜ್ ಮಾಡಿದರೆ ತುಂಬ ಹೊತ್ತು ಸತಾಯಿಸಿ ರಿಪ್ಲೈ ಆಡಿ. ನಿಮ್ಮ ಪ್ರತಿಕ್ರಿಯೆಗೆ ಆಕೆ ಹಾತೊರೆಯುವಂತಾಗಬೇಕು.

4) ನಿರೀಕ್ಷೆ ಹುಟ್ಟುಹಾಕಿ:

ಹುಡುಗರು ತನ್ನನ್ನು ರಾಜಕುಮಾರಿಯಂತೆ ಟ್ರೀಟ್ ಮಾಡಲಿ ಎಂದು ಹುಡುಗಿಯರು ಇಷ್ಟಪಡುತ್ತಾರೆ. ಆಕೆಗೆ ರೋಸ್ ಹೂ ಅಥವಾ ಗಿಫ್ಟ್ ಕೊಡುವ ಮೊದಲು ಆಕೆ ನಿಮ್ಮ ಮನಸಿನಲ್ಲಿ ಇದ್ದಾಳೆಂಬುದನ್ನ ಸೂಚ್ಯವಾಗಿ ಹೇಳುವ ಮೆಸೇಜ್'ಗಳನ್ನ ಕಳುಹಿಸಿ. ಇದರಿಂದ ಹುಡುಗಿಯ ಮನಸಿನಲ್ಲಿ ರಾಜಕುಮಾರಿಯ ಫೀಲಿಂಗ್ ಹುಟ್ಟುತ್ತದೆ. ನಿಮ್ಮನ್ನ ರಾಜಕುಮಾರನಂತೆ ಟ್ರೀಟ್ ಮಾಡಲು ಸಾಧ್ಯವಾಗುತ್ತದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com